ದೇಶದ ಜನರಿಗೆ ಪ್ರಧಾನಿ ಬರೆದ ಪತ್ರದಲ್ಲಿ ಸತ್ಯವೆಷ್ಟು? ಮಿಥ್ಯವೆಷ್ಟು??

✒️ಎಂ.ಕೆ.ಫೈಝಿ
ರಾಷ್ಟ್ರೀಯ ಅಧ್ಯಕ್ಷ, ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)

ಕೇಂದ್ರ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು “ರಾಷ್ಟ್ರಕ್ಕೆ ಬರೆದ ಪತ್ರ” ಓದಲು ತುಂಬಾ ಆಸಕ್ತಿದಾಯಕವಾಗಿದೆ. ಎಲ್ಲದಕ್ಕೂ “ನೆಹರೂ ಕಾರಣ” ಎಂಬ ತಮ್ಮ ವಿಶಿಷ್ಟವಾದ ಎಂದಿನ ಶೈಲಿಗಿಂತ ಭಿನ್ನವಾಗಿ, ಈ ಬಾರಿ ಪ್ರಧಾನ ಮಂತ್ರಿ ಮೊದಲ ಬಾರಿಗೆ ಲಾಕ್‌ಡೌನ್‌ನಿಂದಾಗಿ ತನ್ನ ದೇಶದ ಜನಸಾಮಾನ್ಯರಿಗೆ ಸಂಕಷ್ಟ ಉಂಟಾಗಿದೆ ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ವಲಸೆ ಕಾರ್ಮಿಕರು ಹಸಿವು, ಬಾಯಾರಿಕೆ ಮತ್ತು ಬಳಲಿಕೆಯಿಂದಾಗಿ ರಸ್ತೆ ಮತ್ತು ರೈಲ್ವೆ ಹಳಿಗಳಲ್ಲಿ ಹೆಣಗಾಡುತ್ತಿರುವ ಮತ್ತು ಸಾಯುತ್ತಿರುವ ದುಃಖಕರ ಸಂಗತಿಗಳನ್ನು ಪ್ರಧಾನಿಯವರ ಸಹೋದ್ಯೋಗಿಗಳು ಅಪಹಾಸ್ಯ ಮಾಡುತ್ತಿರುವಾಗ, ನೂರಾರು ಕಿಲೋಮೀಟರ್ ದೂರವನ್ನು ಬರಿಗಾಲಿನಿಂದ ನಡೆದುಕೊಂಡು ತಮ್ಮ ಮನೆಗೆ ತಲುಪಲು ಬಿಸಿಲಿನಿಂದ ಬಳಲುತ್ತಿರುವ ಕಾರ್ಮಿಕರ ನೋವುಗಳ ಸಂಗತಿಯನ್ನು ಪ್ರಧಾನಿ ಒಪ್ಪಿಕೊಂಡಿರುವುದು ಸ್ವಾಗತಾರ್ಹ ಹೆಜ್ಜೆಯಾಗಿದೆ.
೧. ಪತ್ರದಲ್ಲಿನ ಕೆಲವು ಪ್ರಮುಖ ಹೇಳಿಕೆಗಳು ಹೀಗಿವೆ:
• ಕೊರೋನಾ ಭಾರತದಲ್ಲಿ ಹರಡಿದರೆ ಭಾರತವು ಜಗತ್ತಿಗೆ ದೊಡ್ಡ ಸಮಸ್ಯೆಯಾಗಲಿದೆ ಎಂದು ಹಲವರು ಭಯಪಟ್ಟರು. ಆದರೆ ಇಂದು, ಸಂಪೂರ್ಣ ವಿಶ್ವಾಸ ಮತ್ತು ಶೀಘ್ರ ಚೇತರಿಕೆ ಸಾಮರ್ಥ್ಯದ ಮೂಲಕ, ಜಗತ್ತು ನಮ್ಮನ್ನು ನೋಡುವ ವಿಧಾನವನ್ನು ನೀವು ಪರಿವರ್ತಿಸಿದ್ದೀರಿ. ವಿಶ್ವದ ಪ್ರಬಲ ಮತ್ತು ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಭಾರತೀಯರ ಸಾಮೂಹಿಕ ಶಕ್ತಿ ಮತ್ತು ಸಾಮರ್ಥ್ಯವು ಸಾಟಿಯಿಲ್ಲ ಎಂದು ನೀವು ಸಾಬೀತುಪಡಿಸಿದ್ದೀರಿ.
• ಕೊರೋನಾ ಪ್ರಕರಣಗಳ ಬಗ್ಗೆ ಎನ್‌ಡಿಟಿವಿ ಮಾಹಿತಿ (೩೦/೦೫/೨೦ ಮಧ್ಯಾಹ್ನ) ಇಲ್ಲಿದೆ; ಭಾರತದಲ್ಲಿ ಕಳೆದ ೨೪ ಗಂಟೆಗಳಲ್ಲಿ ೭,೯೬೪ ಹೊಸ ಕೊರೋನವೈರಸ್ ಪ್ರಕರಣ ವರದಿಯಾಗಿದೆ, ಜನವರಿಯಲ್ಲಿ ದೇಶದಲ್ಲಿ ಮೊದಲ ಪ್ರಕರಣ ವರದಿಯಾದ ನಂತರ, ಇದು ಅತಿ ಹೆಚ್ಚಿನ ಸೋಂಕು ಪ್ರಕರಣವಾಗಿದೆ. ಈ ಅವಧಿಯಲ್ಲಿ ವೈರಸ್‌ನಿಂದಾಗಿ ೨೬೫ ಜನರು ಸಾವನ್ನಪ್ಪಿದ್ದು, ಒಟ್ಟು ಸಾವಿನ ಸಂಖ್ಯೆ ೪,೯೭೧ ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ. ದೇಶದಲ್ಲಿ ಈವರೆಗೆ ೧. ೭೩ ಲಕ್ಷ ಜನರಲ್ಲಿ ಪಾಸಿಟಿವ್ ವರದಿ ಬಂದಿದೆ. ೨೪ ಗಂಟೆಗಳ ಅವಧಿಯಲ್ಲಿ ೭,೦೦೦ ಕ್ಕೂ ಹೆಚ್ಚು ಕೋವಿಡ್-೧೯ ಪ್ರಕರಣಗಳು ಪತ್ತೆಯಾಗಿರುವುದು ಇದು ಸತತ ಎರಡನೇ ಬಾರಿಯಾಗಿದ್ದು, ದಿನಕ್ಕೆ ೬,೦೦೦ಕ್ಕೂ ಹೆಚ್ಚು ಹೊಸ ಪ್ರಕರಣಗಳು ಕಳೆದ ಏಳು ದಿನಗಳಲ್ಲಿ ನಿರಂತರವಾಗಿ ದಾಖಲಾಗುತ್ತಿವೆ. ಕೊರೋನಾ ಪ್ರಕರಣಗಳ ಸಂಖ್ಯೆಯಲ್ಲಿ ಭಾರತ ಜಗತ್ತಿನ ದೇಶಗಳ ಪೈಕಿ ೯ನೇ ಸ್ಥಾನದಲ್ಲಿರುವಾಗ ಪ್ರಧಾನಿಯವರ ಈ ಹೇಳಿಕೆಯಿಂದ ಅವರು ಏನು ಹೇಳಲು ಹೊರಟಿದ್ದಾರೆ?
• ಇಂತಹ ಸಮಯದಲ್ಲಿ, ಭಾರತ ಸೇರಿದಂತೆ ವಿವಿಧ ದೇಶಗಳ ಆರ್ಥಿಕತೆಗಳು ಹೇಗೆ ಚೇತರಿಸಿಕೊಳ್ಳುತ್ತವೆ ಎಂಬ ಬಗ್ಗೆ ವ್ಯಾಪಕ ಚರ್ಚೆಯೂ ನಡೆಯುತ್ತಿದೆ. ಆದಾಗ್ಯೂ, ಭಾರತವು ತನ್ನ ಒಗ್ಗಟ್ಟು ಮತ್ತು ಕೊರೊನಾವೈರಸ್ ವಿರುದ್ಧದ ಹೋರಾಟದಲ್ಲಿ ದೃಢನಿಶ್ಚಯದಿಂದ ಜಗತ್ತನ್ನು ಅಚ್ಚರಿಗೊಳಿಸಿದ ರೀತಿಯನ್ನು ಗಮನಿಸಿದರೆ, ಆರ್ಥಿಕ ಪುನರುಜ್ಜೀವನದಲ್ಲೂ ನಾವು ಒಂದು ನಿದರ್ಶನವನ್ನು ಜಗತ್ತಿಗೆ ನೀಡುತ್ತೇವೆ ಎಂಬ ದೃಢವಾದ ನಂಬಿಕೆ ಇದೆ. ಆರ್ಥಿಕ ಕ್ಷೇತ್ರದಲ್ಲಿ, ತಮ್ಮ ಶಕ್ತಿಯ ಮೂಲಕ, ೧೩೦ ಕೋಟಿ ಭಾರತೀಯರು ಜಗತ್ತನ್ನು ಅಚ್ಚರಿಗೊಳಿಸುವುದು ಮಾತ್ರವಲ್ಲ ಜಗತ್ತಿಗೆ ಸ್ಫೂರ್ತಿಯನ್ನು ನೀಡಬಹುದು.
• ದೇಶದ ಜಿಡಿಪಿ ಬೆಳವಣಿಗೆ ದರ ಶೇಕಡಾ ೩.೧ರಷ್ಟು ತಲುಪಿದ್ದು, ಇದು ಕಳೆದ ೧೧ ವರ್ಷಗಳಲ್ಲೇ ಅತ್ಯಂತ ಕಡಿಮೆಯಾಗಿದೆ. ಆರ್ಥಿಕ ಬೆಳವಣಿಗೆ (ಇದು ಈಗ ಆರ್ಥಿಕ ಹಿಂಜರಿತ, ಆರ್ಥಿಕ ಬೆಳವಣಿಗೆಯಲ್ಲ) ಬಳಕೆ ಮತ್ತು ಹೂಡಿಕೆಯ ಕುಸಿತದ ಮಧ್ಯೆ ೨೦೧೯-೨೦ರ ಪೂರ್ಣ ಹಣಕಾಸು ವರ್ಷದಲ್ಲಿ ೧೧ ವರ್ಷಗಳಲ್ಲೇ ಕನಿಷ್ಠ ಶೇ.೪.೨ಕ್ಕೆ ಇಳಿಕೆಯಾಗಿದೆ.
ರಾಷ್ಟ್ರೀಯ ಅಂಕಿಅAಶಗಳ ಕಚೇರಿ (ಎನ್‌ಎಸ್‌ಒ) ಶುಕ್ರವಾರ ಬಿಡುಗಡೆ ಮಾಡಿದ ಅಂಕಿಅAಶಗಳ ಪ್ರಕಾರ, ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆ ದರ ೨೦೧೮-೧೯ರ ಇದೇ ತ್ರೈಮಾಸಿಕದಲ್ಲಿ ಶೇ ೫.೭ರಷ್ಟಿತ್ತು ೧೩೦ ಕೋಟಿ ಭಾರತೀಯರು ಆರ್ಥಿಕ ಕ್ಷೇತ್ರದಲ್ಲಿ ಜಗತ್ತನ್ನು ಹೇಗೆ “ಆಶ್ಚರ್ಯಗೊಳಿಸುತ್ತಾರೆ ಮತ್ತು ಪ್ರೇರೇಪಿಸುತ್ತಾರೆ” ಎಂದು ಮೋದಿಯವರು ಉಲ್ಲೇಖಿಸಿಲ್ಲ. ತಟ್ಟೆಗಳನ್ನು ಬಾರಿಸುವುದು ಮತ್ತು ಬೆಳಕನ್ನು ಉರಿಸುವುದರಿಂದ ಕೊರೋನಾ ವೈರಸ್ ಅನ್ನು ಓಡಿಸಬಹುದು ಎಂದು ಅವರು ನಂಬಿದ್ದರಿಂದ ಕೆಲವು ಪವಾಡಗಳು ಸಂಭವಿಸುತ್ತವೆ ಎಂದು ಅವರು ನಂಬುತ್ತಾರೆ. ನಮ್ಮ ಕಾರ್ಮಿಕರ ಬೆವರು, ಕಠಿಣ ಪರಿಶ್ರಮ ಮತ್ತು ಪ್ರತಿಭೆಯೊಂದಿಗೆ ಭಾರತೀಯ ಮಣ್ಣಿನ ಸುಗಂಧವು ದೇಶದ ಉತ್ಪನ್ನಗಳನ್ನು ಸೃಷ್ಟಿಸುತ್ತದೆ, ಅದು ಆಮದಿನ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡಿ ದೇಶವನ್ನು ಸ್ವಾವಲಂಬನೆಯತ್ತ ಕೊಂಡೊಯ್ಯುತ್ತದೆ.
• ಸುಂದರ ಕಾವ್ಯಾತ್ಮಕ ಬರಹ; ದೇಶದ ಯಾವುದೇ ಅಭಿವೃದ್ಧಿಯ ಬೆನ್ನೆಲುಬು ಆಗಿರುವ ಕಾರ್ಮಿಕರು, ಯೋಜಿತವಲ್ಲದ ಲಾಕ್‌ಡೌನ್‌ನಿಂದಾಗಿ ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಯಾವುದೇ ಪೂರ್ವಸಿದ್ಧತೆ ಇಲ್ಲದೆ ಕೇವಲ ೪ ಗಂಟೆಗಳ ಅಂತರದ ಘೋಷಣೆಯಿಂದಾಗಿ, ಲಾಕ್‌ಡೌನ್ ದೇಶದ ವಿವಿಧ ರಾಜ್ಯಗಳಲ್ಲಿ ದುಡಿಯುತ್ತಿರುವ ಲಕ್ಷಾಂತರ ಕಾರ್ಮಿಕರು ತಮ್ಮ ಗ್ರಾಮಗಳು ಮತ್ತು ತಮ್ಮ ಮನೆಗಳಿಗೆ ಮರಳಲು ಅವಕಾಶವಿಲ್ಲದೆ ತೀವ್ರ ತೊಂದರೆ ಅನುಭವಿಸಿದರು. ಮತ್ತು ಅವರು ಸಾವಿರಾರು ಕಿಲೋಮೀಟರ್ ದೂರದವರೆಗೆ ನಡೆಯುವಾಗ ರಸ್ತೆಗಳು ಮತ್ತು ರೈಲ್ವೆ ಹಳಿಗಳಲ್ಲಿ ಹಲವು ಕಾರ್ಮಿಕರು ಮೃತಪಟ್ಟಿದ್ದಾರೆ. ಅವರ ನೋವಿಗೆ ಮತ್ತಷ್ಟು ನೋವು ಮತ್ತು ಅವಮಾನವನ್ನು ಸೇರಿಸುವಂತೆ, ಬಿಜೆಪಿ ಆಡಳಿತ ಇರುವ ರಾಜ್ಯ ಸರ್ಕಾರಗಳು ಈಗಾಗಲೇ “ಆರ್ಥಿಕತೆಯನ್ನು ಬಲಪಡಿಸುವುದಕ್ಕಾಗಿ” ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸುವ ಸುಗ್ರೀವಾಜ್ಞೆಗಳನ್ನು ಪ್ರಕಟಿಸಿವೆ. ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸುವ ಮೂಲಕ ಈ “ಸ್ವಾವಲಂಬನೆ”ಯನ್ನು ಸಾಧಿಸಲಿದ್ದೇನೆ ಎಂದು ಪ್ರಧಾನಿ ನಂಬುತ್ತಾರೆಯೇ? ಇತರ ರಾಜ್ಯಗಳಿಗೆ ತೆರಳುವ ಕಾರ್ಮಿಕರನ್ನು ತಡೆಯುವ ಯುಪಿ-ಸರ್ಕಾರದ ನಿರ್ಧಾರವನ್ನೂ ಇದರೊಂದಿಗೆ ನೆನಪಿಸಿಕೊಳ್ಳಬೇಕಾಗಿದೆ.
• ಕಳೆದ ವರ್ಷದ ಇದೇ ದಿನ ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಸುವರ್ಣ ಅಧ್ಯಾಯ ಪ್ರಾರಂಭವಾಗಿದೆ. ಹಲವಾರು ದಶಕಗಳ ನಂತರ ದೇಶದ ಜನರು ಪೂರ್ಣಾವಧಿಯ ಬಹುಮತದ ಸರ್ಕಾರಕ್ಕೆ ಮತ ಹಾಕಿದರು. ನಿಮ್ಮ ಪ್ರೀತಿ, ಸದ್ಭಾವನೆ ಮತ್ತು ಸಕ್ರಿಯ ಸಹಕಾರವು ಹೊಸ ಶಕ್ತಿಯನ್ನು ಮತ್ತು ಸ್ಫೂರ್ತಿಯನ್ನು ನೀಡಿದೆ. ಪ್ರಜಾಪ್ರಭುತ್ವದ ಸಾಮೂಹಿಕ ಶಕ್ತಿಯನ್ನು ನೀವು ಪ್ರದರ್ಶಿಸಿದ ರೀತಿ ಇಡೀ ಜಗತ್ತಿಗೆ ಮಾರ್ಗದರ್ಶಕ ಬೆಳಕು.
• ವಾಸ್ತವವಾಗಿ, ಎರಡನೆಯ ಅವಧಿಯ ಕಳೆದ ವರ್ಷದ ಇದೇ ದಿನ, ದೇಶವನ್ನು ನಾಶ ಮಾಡಿದ ದಿನವೆಂದು ಗುರುತಿಸಲ್ಪಟ್ಟಿದ್ದು, ಇದು ಭಾರತೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯದ ಆರಂಭವಾಗಿತ್ತು. ಪೂರ್ಣ ಬಹುಮತದ ನಿಮ್ಮ ಹೇಳಿಕೆಯು, ಮತದಾರರು ಮತ್ತು ಮತದಾನ ಯಂತ್ರದ ದುರ್ಬಳಕೆಯ ಕೆಟ್ಟ ವಿಧಾನಗಳ ಮೂಲಕ ಸಾಧಿಸಿದ ಪ್ರಜಾಪ್ರಭುತ್ವದ ಅಪಹಾಸ್ಯವಾಗಿತ್ತು.
• ೨೦೧೪ರಿಂದ ೨೦೧೯ lರವರೆಗೆ ಭಾರತದ ಶ್ರೇಷ್ಟ್ರತೆ ಗಮನಾರ್ಹವಾಗಿ ಏರಿದೆ. ಬಡವರ ಘನತೆಯನ್ನು ಹೆಚ್ಚಿಸಲಾಗಿದೆ. ರಾಷ್ಟ್ರವು ಆರ್ಥಿಕ ಬಲವರ್ಧನೆ, ಉಚಿತ ಅಡುಗೆ ಅನಿಲ ಮತ್ತು ವಿದ್ಯುತ್ ಸಂಪರ್ಕಗಳು, ಒಟ್ಟು ನೈರ್ಮಲ್ಯ ವ್ಯಾಪ್ತಿಯನ್ನು ಸಾಧಿಸಿದೆ ಮತ್ತು ‘ಎಲ್ಲರಿಗೂ ವಸತಿ’ ಖಾತರಿಪಡಿಸುವತ್ತ ಪ್ರಗತಿ ಸಾಧಿಸಿದೆ. • ೨೦೧೪ ರಿಂದ ೨೦೧೯ ರವರೆಗೆ ಆಡಳಿತ ಪಕ್ಷವು ಹಿಂದುತ್ವ ರಾಷ್ಟ್ರದ ಆರ್‌ಎಸ್‌ಎಸ್ ಪರಿಕಲ್ಪನೆಯ ನಿಲುವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ ಮತ್ತು ರಾಷ್ಟ್ರದ ಸಂಪೂರ್ಣ ವ್ಯವಸ್ಥೆಯನ್ನು ರಾಷ್ಟ್ರಪತಿಯಿಂದ ಸೈನಿಕನವರೆಗೆ, ಚುನಾವಣಾ ಆಯೋಗ, ನ್ಯಾಯಾಂಗ ಮತ್ತು ಸರ್ಕಾರದ ಎಲ್ಲಾ ಯಂತ್ರಗಳನ್ನು ಕೂಡ ಕೇಸರೀಕರಣಗೊಳಿಸಲಾಗಿದೆ. ಹಣಕಾಸಿನ ಸೇರ್ಪಡೆ ಇತ್ಯಾದಿಗಳ ಇತರ ಹೇಳಿಕೆಗಳು ಅಂಕಿ ಅಂಶದಲ್ಲಿ ಇನ್ನೂ ಸಾಬೀತಾಗಿಲ್ಲ.
೨. ಭಾರತವು ಸರ್ಜಿಕಲ್ ಸ್ಟ್ರೈಕ್ ಮತ್ತು ವಾಯುದಾಳಿಯ ಮೂಲಕ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಅದೇ ಸಮಯದಲ್ಲಿ, ಒಆರ್‌ಒಪಿ, ಒಂದು ದೇಶ-ಒಂದು ತೆರಿಗೆ- ಜಿಎಸ್‌ಟಿ, ರೈತರಿಗೆ ಉತ್ತಮ ಎಂಎಸ್‌ಪಿ ಮುಂತಾದ ದಶಕಗಳ ಹಳೆಯ ಬೇಡಿಕೆಗಳು ಈಡೇರಿಸಲಾಗಿದೆ.
• ೨೦೧೯ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಪುಲ್ವಾಮಾದಲ್ಲಿ ನಿಗೂಢ ರೀತಿಯಲ್ಲಿ ಭಯೋತ್ಪಾದಕ ದಾಳಿ ನಡೆದಿದ್ದು, ಪರಿಣಾಮ ನಮ್ಮ ೪೨ ಮಂದಿ ಸೈನಿಕರ ಅಮೂಲ್ಯ ಜೀವ ನಷ್ಟವಾಯಿತು. ಅದರ ನಂತರ ವಾಯುದಾಳಿ ನಡೆಯಿತು. ಈ ದಾಳಿಯಲ್ಲಿ ಪಾಕಿಸ್ತಾನದ ೩೦೦ಕ್ಕೂ ಅಧಿಕ ಉಗ್ರರು ಹತ್ಯೆಯಾಗಿದ್ದಾರೆ ಎಂದು ಹೇಳಲಾಯಿತು. ಇಡೀ ಪ್ರಸಂಗದ ಸುತ್ತಲಿನ ರಹಸ್ಯವು ಮುಚ್ಚಿಹೋಗಿದ್ದರೂ, ಇದು ಚುನಾವಣೆಯಲ್ಲಿ ಬಿಜೆಪಿಗೆ ಬಹುಮತವನ್ನು ಗಳಿಸಲು ಸಹಾಯ ಮಾಡಿದೆ.
ಲಡಾಕಖ್ ನಲ್ಲಿ ಚೀನಾದ ಪ್ರಸ್ತುತ ಮಿಲಿಟರಿ ಜಮಾವಣೆಯ ಬಗ್ಗೆ ಸರ್ಕಾರ ಕಿವುಡ ಮತ್ತು ಮೂಕನಂತೆ ವರ್ತಿಸುತ್ತಿದೆ. ಅಂತಾರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಚೀನಾ ಈಗಾಗಲೇ ಸುಮಾರು ೩೫ ಚದರ ಕಿ.ಮೀ.ನಷ್ಟು ಭಾರತದ ಗ್ರಾಮವನ್ನು ಸ್ವಾಧೀನಪಡಿಸಿಕೊಂಡಿದೆ. ಚೀನಾ ಪಡೆ ಭಾರತೀಯ ಪ್ರದೇಶದೊಳಗೆ ತಮ್ಮ ಮಿಲಿಟರಿ ಶಕ್ತಿಯನ್ನು ಬಲಪಡಿಸುತ್ತಿದೆ. ಭಾರತ-ಚೀನಾ ಗಡಿಯಲ್ಲಿನ ಈ ಗಂಭೀರ ಪರಿಸ್ಥಿತಿಗೆ ಮೋದಿ ಅಥವಾ ಅವರ ಪಕ್ಷ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಅವರು ಕೇವಲ ಸರ್ಜಿಕಲ್ ಸ್ಟ್ರೈಕ್ ಅನ್ನು ಬಿಟ್ಟು ಬೇರೇನನ್ನೂ ಹೇಳುತ್ತಿಲ್ಲ. ಹೆಚ್ಚಿನ ಪ್ರಮಾಣದ ಜಿಎಸ್‌ಟಿಯಿಂದಾಗಿ ಸಣ್ಣ-ಕೈಗಾರಿಕೆಗಳು ಮತ್ತು ವ್ಯವಹಾರಗಳು ನೆಲಕ್ಕಚ್ಚಿವೆ. ಮಾತ್ರವಲ್ಲ ೨೦೧೪-೧೯ರ ಅವಧಿಯಲ್ಲಿ ದೇಶದಲ್ಲಿ ಹೆಚ್ಚಿನ ಸಂಖ್ಯೆಯ ರೈತ ಆತ್ಮಹತ್ಯೆಗೆ ಶರಣಾಗುವಂತೆ ಮಾಡಿದೆ.
೩. ಸಂವಿಧಾನದ ೩೭೦ನೇ ವಿಧಿ ರದ್ದತಿಯಿಂದ ರಾಷ್ಟ್ರೀಯ ಏಕತೆ ಮತ್ತು ಏಕೀಕರಣದ ಮನೋಭಾವವನ್ನು ಹೆಚ್ಚಿಸಿದೆ. ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ ಸರ್ವಾನುಮತದಿಂದ ನೀಡಿದ ರಾಮಮಂದಿರ ತೀರ್ಪು ಶತಮಾನಗಳಿಂದಲೂ ನಡೆಯುತ್ತಿರುವ ವಿವಾದಕ್ಕೆ ಸೌಹಾರ್ದಯುತ ಅಂತ್ಯ ನೀಡಿದೆ. ತ್ರಿವಳಿ ತಲಾಖ್ ಎಂಬ ಅನಾಗರಿಕ ಅಭ್ಯಾಸವು ಇತಿಹಾಸದ ಕಸದಬುಟ್ಟಿಗೆ ಸೇರಿದೆ. ಪೌರತ್ವ ಕಾಯ್ದೆಗೆ ತಿದ್ದುಪಡಿ, ಭಾರತದ ಸಹಾನುಭೂತಿ ಮತ್ತು ಒಳಗೊಳ್ಳುವಿಕೆಯ ಮನೋಭಾವದ ಅಭಿವ್ಯಕ್ತಿಯಾಗಿದೆ.
• ೩೭೦ ನೇ ವಿಧಿಯನ್ನು ರದ್ದುಪಡಿಸಿರುವುದು “ರಾಷ್ಟ್ರೀಯ ಏಕತೆ ಮತ್ತು ಏಕೀಕರಣದ ಮನೋಭಾವವನ್ನು ಹೆಚ್ಚಿಸಿದೆ” ಎಂಬ ಹೇಳಿಕೆಯಿಂದ ಪ್ರಧಾನಿ ಇಡೀ ದೇಶವನ್ನು ಅಪಹಾಸ್ಯ ಮಾಡುತ್ತಿದ್ದಾರೆ. ೩೭೦ ರದ್ದತಿಯ ನಂತರ ಕಾಶ್ಮೀರವನ್ನು ಸಂಪೂರ್ಣ ಲಾಕ್‌ಡೌನ್‌ಗೆ ತಳ್ಳಲಾಗಿದೆ. ಇಂಟರ್ ನೆಟ್ ಸೌಲಭ್ಯಗಳನ್ನು ರದ್ದುಪಡಿಸಲಾಗಿದೆ. ರಾಜಕೀಯ ಪಕ್ಷದ ನಾಯಕರನ್ನು ಗೃಹಬಂಧನದಲ್ಲಿರಿಸಲಾಗಿದೆ ಮತ್ತು ಎಲ್ಲಾ ಪ್ರಜಾಪ್ರಭುತ್ವ ತತ್ವಗಳನ್ನು ನಿರ್ದಯವಾಗಿ ಹತ್ತಿಕ್ಕಲಾಯಿತು. ಸಂವಿಧಾನದ ೩೭೧ರ ಅಡಿಯಲ್ಲಿ ಇತರ ಹಲವು ರಾಜ್ಯಗಳ ವಿಶೇಷ ಸವಲತ್ತುಗಳನ್ನು ಹಾಗೇ ಮುಂದುವರಿಸಲಾಗಿದೆ ಮತ್ತು ಕೆಲವು ರಾಜ್ಯಗಳಿಗೆ ಹೆಚ್ಚುವರಿಯಾಗಿ ಐಎಲ್‌ಪಿ (ಇನ್ನರ್ ಲೈನ್ ಪರ್ಮಿಟ್) ಅನುಷ್ಠಾನಗೊಳಿಸುವ ಹಕ್ಕನ್ನು ನೀಡಲಾಗಿದೆ. ೩೭೦ನೇ ವಿಧಿಯನ್ನು ರದ್ದುಪಡಿಸುವುದು “ರಾಷ್ಟ್ರೀಯ ಏಕತೆ ಮತ್ತು ಏಕೀಕರಣದ ಮನೋಭಾವವನ್ನು ಹೇಗೆ ಹೆಚ್ಚಿಸಿದೆ” ಎಂದು ಪ್ರಧಾನಿ ರಾಷ್ಟ್ರಕ್ಕೆ ವಿವರಿಸಿ ಹೇಳಬೇಕಾಗಿದೆ.
ರಾಮ ಮಂದಿರದ ತೀರ್ಪು (ಬಾಬರಿ ಮಸೀದಿ ಎಂದು ಹೇಳದೆ ಅವರು ತುಂಬಾ ಜಾಗರೂಕರಾಗಿದ್ದಾರೆ) ಇದು ನ್ಯಾಯದ ಅಣಕವಾಗಿದೆ. ಈ ಜಾಗದಲ್ಲಿ ರಾಮ ಮಂದಿರ ಇತ್ತು ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯವು ಸ್ಪಷ್ಟವಾಗಿ ಹೇಳಿದೆ, ಈ ಭೂಮಿ ಮುಸ್ಲಿಮರ ಒಡೆತನದಲ್ಲಿದೆ, ಮಸೀದಿ ನೆಲಸಮ ಮಾಡಿರುವುದು ಕಾನೂನುಬಾಹಿರವಾಗಿದೆ, ಇತ್ಯಾದಿ ವಿಷಯಗಳನ್ನು ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ತೀರ್ಪಿನ ಅನುಷ್ಠಾನದ ಭಾಗವು ತನ್ನದೇ ತೀರ್ಪಿನ ಅಂಶಗಳಿಗೆ ವಿರುದ್ಧವಾಗಿತ್ತು ಎಂಬುದು ವಿಪರ್ಯಾಸ. ಇದು ಸರ್ಕಾರದ ಒತ್ತಡದಲ್ಲಿ ರಾಜಕೀಯ ತೀರ್ಪು ಎಂದು ಸೂಚಿಸುವ ಮನ್ನಣೆಯನ್ನು ಪಡೆಯಲು ಪ್ರಧಾನಿ ಸಾಕಷ್ಟು ಪ್ರಾಮಾಣಿಕರಾಗಿ ಹೇಳಿಕೆ ನೀಡುತ್ತಿದ್ದಾರೆ. ಸಿಎಎಯನ್ನು “ಭಾರತದ ಸಹಾನುಭೂತಿ ಮತ್ತು ಅಂತರ್ಗತ ಮನೋಭಾವದ ಅಭಿವ್ಯಕ್ತಿ” ಎಂದು ಅವರು ವಿವರಿಸಿದ್ದು ಸಂಪೂರ್ಣವಾಗಿ ಹಾಸ್ಯಾಸ್ಪದವಾಗಿದೆ. ತಿದ್ದುಪಡಿಯು ವಾಸ್ತವವಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ದೇಶದ ಹೊರಗಿಡಲು ಉದ್ದೇಶಿಸಿದೆ, ಮತ್ತು ಇದು “ಒಂದು ಅಭಿವ್ಯಕ್ತಿ… .. ಒಳಗೊಳ್ಳುವಿಕೆಯ ಸ್ಫೂರ್ತಿ ” ಎಂದು ಅವರು ಹೇಳುತ್ತಾರೆ. ಆದರೆ ಇದು ಸ್ವಯಂ ಆಘಾತಕಾರಿ ಎಂದು ತೋರುತ್ತದೆ.
ಇದು ಅವರ ಸಾಂದರ್ಭಿಕವಾಗಿ ಬರುವ “ಮನ್ ಕಿ ಬಾತ್” ದ ಪ್ರತಿರೂಪವಾಗಿದ್ದು ಅದು ಅವರ ನಿಜವಾದ ಮನಸ್ಸನ್ನು ಪ್ರತಿಬಿಂಬಿಸುವುದಿಲ್ಲ ಅಥವಾ ಬಹುಸಂಖ್ಯಾತ ನಾಗರಿಕರ ಮನಸ್ಸನ್ನು ಮುಟ್ಟುವುದಿಲ್ಲ. ಭಾರತವು ಬಹುಪಾಲು ಜನರು ರೇಡಿಯೊವನ್ನು ಕೇಳದ ದೇಶ ಮಾತ್ರವಲ್ಲ, ಆದರೆ ಜನಸಂಖ್ಯೆಯ ಕನಿಷ್ಠ ಮೂರನೇ ಒಂದು ಭಾಗದಷ್ಟು ಜನರು ಕೂಡ ತಮ್ಮ ಪ್ರಧಾನ ಮಂತ್ರಿಯವರ ಪತ್ರವನ್ನೂ ಓದಲಾಗದ ದೇಶವಾಗಿದೆ. ಆರ್‌ಎಸ್‌ಎಸ್ ನಿಯಂತ್ರಿತ ಬಿಜೆಪಿ ಸರ್ಕಾರದ ಅಡಿಯಲ್ಲಿ ಭಾರತೀಯ ಪ್ರಜಾಪ್ರಭುತ್ವದ ಮತ್ತೊಂದು ಆಯಾಮ ಹೆಚ್ಚು ಪ್ರವರ್ಧಮಾನಕ್ಕೆ ಬಂದಿದೆ. ವಿಕಾಸದಲ್ಲಿರುವ ವಿಶ್ವಾಸಗಳು ಮಾತ್ರವಲ್ಲ ವಿಕಾಸ ಪುರುಷ ಕೂಡ ಈ ರಾಷ್ಟ್ರ ಮತ್ತು ಅದರ ಜನರನ್ನು ಉಳಿಸುವುದಿಲ್ಲ.

Leave a Reply

Your email address will not be published. Required fields are marked *