ದೇಶದಲ್ಲಿ 3.95 ಲಕ್ಷ ಕೊರೋನಾ ಸೋಂಕಿತರು! ಜೂನ್ ತಿಂಗಳಲ್ಲೇ 7,484 ಮಂದಿ ಸಾವು!!

ಹೊಸದಿಲ್ಲಿ: ದೇಶದಲ್ಲಿ ಇಂದು 14 ಸಾವಿರಕ್ಕೂ ಹೆಚ್ಚು ಮಹಾಮಾರಿ ಕೊರೋನಾ ಸೋಂಕು ಪ್ರಕರಣ ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 3.95 ಲಕ್ಷಕ್ಕೆ ಮುಟ್ಟಿದ್ದು ಆತಂಕವನ್ನು ಹೆಚ್ಚಿಸಿದೆ. ಜೂನ್ ತಿಂಗಳಲ್ಲಿ ವರದಿಯಾದ ಕೋವಿಡ್-19 ಪ್ರಕರಣಗಳ ಸಂಖ್ಯೆ 2,10,655 ಆಗಿದೆ. ದೇಶದಲ್ಲಿ ಇದುವರೆಗೆ ಪತ್ತೆಯಾದ ಪ್ರಕರಣಗಳ ಪೈಕಿ ಶೇ. 53ರಷ್ಟು ಪ್ರಕರಣಗಳು ಜೂನ್ ತಿಂಗಳಲ್ಲೇ ದೃಢಪಟ್ಟಿವೆ. ಅಂತೆಯೇ ಸೋಂಕಿನಿಂದ ಮೃತಪಟ್ಟ 12,888 ಮಂದಿಯ ಪೈಕಿ 7,484 ಸಾವುಗಳು ಜೂನ್ ಒಂದೇ ತಿಂಗಳಲ್ಲಿ ಸಂಭವಿಸಿವೆ.
ನಿನ್ನೆ ದೇಶದಲ್ಲಿ 14,052 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿತ್ತು. ಇಂದು ಮತ್ತೆ 14,574 ಪ್ರಕರಣಗಳು ದೃಢಪಟ್ಟಿವೆ. ಮಹಾರಾಷ್ಟ್ರ 3,827, ದೆಹಲಿ 3,137 ಪ್ರಕರಣಗಳು ವರದಿಯಾಗಿತ್ತು. ಮಹಾರಾಷ್ಟ್ರದಲ್ಲಿ ಒಟ್ಟು 1,24,331 ಪ್ರಕರಣಗಳು ದಾಖಲಾಗಿದ್ದು ಇಂದು ಮತ್ತೆ 142 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 5,873ಕ್ಕೇರಿದೆ.

Leave a Reply

Your email address will not be published. Required fields are marked *