ದೇವಾಲಯದ ಹುಂಡಿ ಕಳ್ಳನಿಗೆ ಗ್ರಾಮಸ್ಥರ ಒದೆ!

ಕಡೂರು: ಕಳ್ಳನೊಬ್ಬ ದೇವಾಲಯದ ಹುಂಡಿ ಕಳ್ಳತನ ಮಾಡಲು ಬಂದಿದ್ದು ಈ ವೇಳೆ ಸದ್ದು ಕೇಳಿ ಓಡಿಬಂದ ಗ್ರಾಮಸ್ಥರು ಕಳ್ಳನನ್ನು ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ತಾಲೂಕಿನ ಕಲ್ಲುಹೊಳೆ ಎಂಬಲ್ಲಿ ನಡೆದಿದೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಕಳ್ಳನನ್ನು ಗ್ರಾಮಸ್ಥರ ಕೈಯಿಂದ ರಕ್ಷಿಸಿ ಠಾಣೆಗೆ ಕರೆದೊಯ್ದಿದ್ದಾರೆ.
ಹುಲ್ಲೇ ಕಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಘಟನೆ ನಡೆದಿದೆ. ಮಾರಕಾಸ್ತ್ರ ಬಳಸಿ ದೇವಾಲಯದ ಬಾಗಿಲು ಒಡೆದ ಕಳ್ಳ ಒಳಪ್ರವೇಶಿಸಿದ ಹುಂಡಿ ಒಡೆಯಲು ಮುಂದಾಗಿದ್ದಾನೆ. ಈ ವೇಳೆ ಸದ್ದಾಗಿದ್ದು ಗ್ರಾಮಸ್ಥರು ದೇವಾಲಯವನ್ನು ಸುತ್ತುವರಿದಿದ್ದರು. ಈ ಹಿಂದೆಯೂ ಇದೇ ದೇವಾಲಯದಲ್ಲಿ ಕಳ್ಳತನ ನಡೆದಿದ್ದು ಕಳ್ಳ ಮಾತ್ರ ಸಿಕ್ಕಿರಲಿಲ್ಲ. ಹೀಗಾಗಿ ಕಾರ್ಯಾಚರಣೆ ನಡೆಸಿ ಕಳ್ಳನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿ ಕಡೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.