ದೀಪಿಕಾ ಬಾಡಿಗಾರ್ಡ್ ಗೆ ವರ್ಷಕ್ಕೆ ಕೋಟಿ ರೂ. ಸಂಬಳ

ಮುಂಬೈ: ಬಾಲಿವುಡ್ ಖ್ಯಾತ ನಟಿ ದೀಪಿಕಾ ಪಡುಕೋಣೆ ಬಾಡಿಗಾರ್ಡ್ ವರ್ಷಕ್ಕೆ ಬರೋಬ್ಬರಿ ಒಂದು ಕೋಟಿ ರೂ. ಸಂಬಳ ಪಡೆಯುತ್ತಿದ್ದಾರೆ. ದೀಪಿಕಾ ಜೊತೆ ಅನೇಕ ವರ್ಷಗಳಿಂದ ಬಾಡಿಗಾರ್ಡ್ ಆಗಿ ಜಲಾಲ್ ಕೆಲಸ ಮಾಡುತ್ತಿದ್ದಾರೆ. ದೀಪಿಕಾ ಅವರ ಕುಟುಂಬ ಸದಸ್ಯರಂತೆ ಜಲಾಲ್ ಇದ್ದು ಅವರನ್ನು ದೀಪಿಕಾ ತನ್ನ ಸಹೋದನ ಹಾಗೆ ಕಾಣುತ್ತಾರೆ. ರಕ್ಷಾ ಬಂಧನದಂದು ದೀಪಿಕಾ ಜಲಾಲ್ ಗೆ ರಾಖಿ ಕಟ್ಟುತ್ತಾರೆ.
ದೀಪಿಕಾ ಎಲ್ಲಿ ಹೋದರೂ ಜಲಾಲ್ ನೆರಳಿನ ಹಾಗೆ ಜೊತೆಯಲ್ಲಿಯೇ ಇರುತ್ತಾರೆ. ದೀಪಿಕಾ ಅವರನ್ನು ರಕ್ಷಣೆ ಮಾಡುವ ಜಲಾಲ್ ವರ್ಷಕ್ಕೆ ಒಂದು ಕೋಟಿ ರೂಪಾಯಿ ಸಂಬಳ ಪಡೆಯುತ್ತಾರೆ. ಕಳೆದ ಮೂರು ವರ್ಷಗಳ ಹಿಂದೆ ಜಲಾಲ್ ಸಂಬಳ ವರ್ಷಕ್ಕೆ 80 ಸಾವಿತ್ತು ಎನ್ನಲಾಗಿದೆ. ಇತ್ತೀಚೆಗೆ ಸಂಬಳ ಒಂದು ಕೋಟಿಗೆ ಏರಿಕೆಯಾಗಿದೆ. ತಿಂಗಳಿಗೆ 10 ಲಕ್ಷ ಸಂಬಳ ಪಡೆಯುತ್ತಿದ್ದಾರೆ. ದೀಪಿಕಾ ಮನೆಯಿಂದ ಹೊರಬಂದರೆ ಸಾಕು ಸೆಲ್ಫಿಗಾಗಿ ಮುತ್ತಿಕೊಳ್ಳುತ್ತಾರೆ, ಹೋದಲ್ಲಿ ಬಂದಲ್ಲಿ ಅಭಿಮಾನಿಗಳ ಕಾಟ ಅಷ್ಟಿಷ್ಟಲ್ಲ. ಅವರೆಲ್ಲರಿಂದ ದೀಪಿಕಾರನ್ನು ಪಾರುಮಾಡಲು ಜಲಾಲ್ ಸದಾ ಬೆಂಗಾವಲಾಗಿ ಜೊತೆಯಲ್ಲಿರುತ್ತಾರೆ.