ದಾವಣಗೆರೆ: ಐವರು ಗರ್ಭಿಣಿಯರಲ್ಲಿ ಮಾರಕ ಕೊರೊನಾ ಪತ್ತೆ!

ದಾವಣರೆಗೆ: ನಗರದಲ್ಲಿ ಐವರು ಗರ್ಭಿಣಿಯರಲ್ಲಿ ಮಾರಕ ಕೊರೊನಾ ಸೋಂಕು ಪತ್ತೆಯಾಗಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಎರಡು ದಿನಗಳ ಹಿಂದೆ ಮಹಾರಾಷ್ಟ್ರದಿಂದ ಬಂದಿದ್ದ ಒಬ್ಬ ಗರ್ಭಿಣಿಗೆ ಸೋಂಕು ತಗಲಿತ್ತು. ಆದರೆ ನಿನ್ನೆ ಒಂದೇ ದಿನ ಐವರು ಗರ್ಭಿಣಿಯರಲ್ಲಿ ಸೋಂಕು ಪತ್ತೆಯಾಗಿದ್ದು, ಯಾರಿಂದ, ಹೇಗೆ ಸೋಂಕು ತಗುಲಿದೆ ಎಂಬುದನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ.
ಹರಿಹರ ತಾಲೂಕಿನ ರಾಜನಹಳ್ಳಿಯ ಓರ್ವ ಮಹಿಳೆಗೆ, ದೊಡ್ಡಬಾತಿಯಲ್ಲಿ ಒಬ್ಬರು ಹಾಗೂ ಆವರಗೊಳ್ ಗ್ರಾಮದ ಇಬ್ಬರು ಮಹಿಳೆಯರಿಗೆ, ನಗರದ ವೆಂಕಾಭೋವಿ ಕಾಲೋನಿಯ ಓರ್ವ ಮಹಿಳೆ ಸೇರಿದಂತೆ ಒಟ್ಟು ಐದು ಜನ ಗರ್ಭಿಣಿಯರಲ್ಲಿ ಸೋಂಕು ಪತ್ತೆಯಾಗಿದೆ. ಈ ಐದು ಜನ ಮಹಿಳೆಯರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

Leave a Reply

Your email address will not be published. Required fields are marked *