ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8, ಉಡುಪಿಯಲ್ಲಿ 11 ಮಂದಿಗೆ ಕೊರೊನಾ
ಮಂಗಳೂರು: ನಿನ್ನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8, ಉಡುಪಿಯಲ್ಲಿ 11 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು 322 ಮಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ.
ದಕ್ಷಿಣ ಕನ್ನಡ: ದ.ಕ. ಜಿಲ್ಲೆಯಲ್ಲಿ ನಿನ್ನೆ 8 ಮಂದಿಗೆ ಕೊರೊನಾ ದೃಢವಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 453ಕ್ಕೆ ಏರಿಕೆಯಾಗಿದೆ. ಈ ಪೈಕಿ 10 ಮಂದಿ ಹೊರ ಜಿಲ್ಲೆಯವರು. ನಿನ್ನೆ 6 ಮಂದಿ ಗುಣಮುಖರಾಗಿದ್ದು, ಇದುವರೆಗೆ 256 ಮಂದಿ ಸೋಂಕು ಮುಕ್ತರಾದಂತಾಗಿದೆ.
ಕುವೈತ್‍ನಿಂದ ಓರ್ವ, ಪಿ-8318ರ ಪ್ರಾಥಮಿಕ ಸಂಪರ್ಕ ಹೊಂದಿದ್ದ ನಾಲ್ವರು, ಐಎಲ್‍ಐ ಪ್ರಕರಣದಲ್ಲಿ ಓರ್ವ, ಎಸ್‍ಎಎಆರ್‍ಐ ಪ್ರಕರಣದಲ್ಲಿ ಇಬ್ಬರಿಗೆ ಸೋಂಕು ಪತ್ತೆಯಾಗಿದೆ.
ಪಿ-8918ರ ಪ್ರಾಥಮಿಕ ಸಂಪರ್ಕದಲ್ಲಿದ್ದ 28, 25 ವರ್ಷದ ಮಹಿಳೆಯರು, 17, 50 ವರ್ಷದ ನಾಲ್ವರನ್ನು ಕ್ವಾರಂಟೈನ್‍ನಲ್ಲಿರಿಸಲಾಗಿತ್ತು. ಇದರಲ್ಲಿ 49 ವರ್ಷದ ಪುರುಷ ಹಾಗೂ 59 ವರ್ಷದ ಮಹಿಳೆಯು ಮಂಗಳೂರಿನ ನಿವಾಸಿಗಳಾಗಿದ್ದು, ಇವರನ್ನು ಎಸ್‍ಎಎಆರ್‍ಐ ಪ್ರಕರಣಕ್ಕೆ ಸೇರ್ಪಡೆ ಮಾಡಲಾಗಿದೆ. 27 ವರ್ಷದ ಮಂಗಳೂರಿನ ಮಹಿಳೆಯನ್ನು `ಇನ್‍ಫ್ಲೂಯೆಂಝಾ ಲೈಕ್ ಇಲ್‍ನೆಸ್’ ಪ್ರಕರಣಕ್ಕೆ ಸೇರ್ಪಡೆಗೊಳಿಸಲಾಗಿದೆ.
ಉಡುಪಿ: ಬೈಂದೂರು ಪೆÇಲೀಸ್ ಠಾಣೆಯ 37ರ ಹರೆಯದ ಮಹಿಳಾ ಪೆÇಲೀಸ್ ಕಾನ್‍ಸ್ಟೇಬಲ್ ಸೇರಿ ಉಡುಪಿಯಲ್ಲಿ ಒಟ್ಟು 11 ಮಂದಿಗೆ ಕೊರೊನಾ ದೃಢವಾಗಿದೆ.
11 ಮಂದಿಯಲ್ಲಿ 10 ಮಂದಿ ಕುಂದಾಪುರದವರಾದರೆ, ಒಬ್ಬರು ಉಡುಪಿಯವರು. ನಾಲ್ವರು ಪುರುಷರು, ಮೂವರು ಮಹಿಳೆಯರು ಹಾಗೂ 10 ವರ್ಷದೊಳಗಿನ ಪ್ರಾಯದ ಮೂವರು ಬಾಲಕರು ಹಾಗೂ ಒಬ್ಬ ಬಾಲಕಿ ಸೇರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಈಗ 1088ಕ್ಕೇರಿದೆ. ನಿನ್ನೆ 9 ಮಂದಿ ಸೋಂಕಿತರು ಬಿಡುಗಡೆಗೊಂಡಿದ್ದು, 108 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.