ದಕ್ಷಿಣ ಕನ್ನಡ ಜಿಲ್ಲೆಯಲ್ಲಿ `ಕೊರೊನಾರ್ಭಟ’! ಇಂದು 79 ಮಂದಿಗೆ ಸೋಂಕು?
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ದಾಖಲೆ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರು ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ. ಬರೋಬ್ಬರಿ 79 ಮಂದಿಯಲ್ಲಿ ಮಹಾಮಾರಿ ಪತ್ತೆಯಾಗಿದ್ದು ಅವರನ್ನು ಕ್ವಾರಂಟೈನ್ ಕೇಂದ್ರದಿಂದ ಕೋವಿಡ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಕೆಲವು ದಿನಗಳ ಹಿಂದೆ ಸೌದಿಯಿಂದ ಮರಳಿದ್ದ 74 ಮಂದಿ ಹಾಗೂ ಮಹಾರಾಷ್ಟ್ರದಿಂದ ಮರಳಿದ್ದ ಐವರಲ್ಲಿ ಸೋಂಕು ಪತ್ತೆಯಾಗಿರುವ ಮಾಹಿತಿಯಿದ್ದು ಇದು ಜಿಲ್ಲೆಯಲ್ಲಿ ಪತ್ತೆಯಾಗಿರುವ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಒಂದೇ ದಿನದ ದಾಖಲೆಯಾಗಿದೆ.