ತಂದೆಯನ್ನು ಬೆತ್ತಲೆ ಸ್ಥಿತಿಯಲ್ಲಿ ರಸ್ತೆಗೆಸೆದು ಹೋದ ಪುತ್ರ, ದೇರಳಕಟ್ಟೆಯಲ್ಲಿ ಅಮಾನವೀಯ ಕೃತ್ಯ!
ಮಂಗಳೂರು: ಮುಂಬೈಯಿಂದ ಬಂದು ಕ್ವಾರಂಟೈನ್ ನಲ್ಲಿದ್ದ ವೃದ್ಧ ತಂದೆಯನ್ನು ಪಾಪಿ ಪುತ್ರನೋರ್ವ ಲಾಡ್ಜ್ ನಿಂದ ಹೊರಗೆ ರಸ್ತೆಗೆ ಬೆತ್ತಲೆಯಾಗಿಯೇ ಎಳೆದೊಯ್ದು ಹೋಗಿ ರಸ್ತೆ ಬದಿ ತ್ಯಜಿಸಿ ಪರಾರಿಯಾಗಿರುವ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ದೇರಳಕಟ್ಟೆ ಎಂಬಲ್ಲಿ ಬೆಳಕಿಗೆ ಬಂದಿದೆ. ಈ ಕುರಿತ ಸಿಸಿ ಕೆಮರಾ ಫುಟೇಜ್ ಪರಿಶೀಲನೆ ನಡೆಸಿರುವ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.
ದೇರಳಕಟ್ಟೆಯ ಲಾಡ್ಜ್ ನಲ್ಲಿ ವಾಸವಿದ್ದ ವೃದ್ಧ ತಂದೆಯನ್ನು ಪುತ್ರ ಕಾಲಿನಲ್ಲಿ ಹಿಡಿದು ಎಳೆದೊಯ್ಯುತ್ತಿರುವ ದೃಶ್ಯ ಸಿಸಿ ಕೆಮರಾದಲ್ಲಿ ರೆಕಾರ್ಡ್ ಆಗಿದೆ. ವೃದ್ಧ ಸ್ಥಳೀಯ ನಿವಾಸಿಯಾಗಿದ್ದು ಮುಂಬೈಯಿಂದ ಬಂದಿದ್ದರು ಎನ್ನಲಾಗಿದೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ವೃದ್ಧರನ್ನು ಸ್ಥಳೀಯ ಅಂಗಡಿ ಮಾಲಕರು ಆರೈಕೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Chi Nachige agbeku,Paapi Maganannu galligerisabeku…..