ಡಿಕೆಶಿ ನಿವಾಸದಲ್ಲಿ ಹೆಣ್ಣು ನೋಡುವ ಶಾಸ್ತ್ರ, ಐಶ್ವರ್ಯ ವಿವಾಹಕ್ಕೆ ಇಂದು ದಿನ ನಿಗದಿ!
ಡಿಕೆಶಿ ನಿವಾಸದಲ್ಲಿ ಹೆಣ್ಣು ನೋಡುವ ಶಾಸ್ತ್ರ! ಐಶ್ವರ್ಯ-ಅಮಥ್ರ್ಯ ವಿವಾಹಕ್ಕೆ ಇಂದು ದಿನ ನಿಗದಿ!
ಬೆಂಗಳೂರು: ನಿನ್ನೆ `ಕೆಫೆ ಕಾಫಿ ಡೇ’ ಮಾಲಕ ದಿ.ಸಿದ್ದಾರ್ಥ್ ಅವರ ಮನೆಯಲ್ಲಿ ಡಿಕೆ ಶಿವಕುಮಾರ್ ಕುಟುಂಬ ತಾಂಬೂಲ ಶಾಸ್ತ್ರ ನೆರವೇರಿಸಿದ್ದು ಇಂದು ಸದಾಶಿವ ನಗರದಲ್ಲಿರುವ ಡಿಕೆ ಶಿವಕುಮಾರ್ ಅವರ ನಿವಾಸದಲ್ಲಿ ಹೆಣ್ಣು ನೋಡುವ ಶಾಸ್ತ್ರಕ್ಕೆ ಸಿದ್ದಾರ್ಥ್ ಕುಟುಂಬ ತೆರಳಿದ್ದು ಇಂದೇ ಐಶ್ವರ್ಯ ಹಾಗೂ ಅಮಥ್ರ್ಯ ಅವರ ವಿವಾಹಕ್ಕೆ ದಿನ ನಿಗದಿಯಾಗಲಿದೆ ಎಂದು ಕುಟುಂಬದ ಆಪ್ತಮೂಲಗಳು ಹೇಳಿವೆ.
ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಎಸ್ಎಂ ಕೃಷ್ಣ ಅವರ ಅಳಿಯ, ದಿವಂಗತ ಉದ್ಯಮಿ ಸಿದ್ಧಾರ್ಥ ಅವರ ಪುತ್ರ ಅಮಥ್ರ್ಯ ಮದುವೆಗೆ ನಿನ್ನೆ ತಾಂಬೂಲ ಶಾಸ್ತ್ರ ನೆರವೇರಿಸಲಾಗಿತ್ತು. ಮುಂದುವರೆದ ಭಾಗವಾಗಿ ಇವತ್ತು ಸದಾಶಿವನರದಲ್ಲಿರುವ ಡಿಕೆಶಿ ನಿವಾಸಕ್ಕೆ ಹೆಣ್ಣು ನೋಡುವ ಶಾಸ್ತ್ರ ನೆರವೇರಿಸಲು ಮಾಜಿ ಸಿಎಂ ಎಸ್ಎಂಕೆ ಕುಟುಂಬ ತೆರಳಿದೆ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಪತ್ನಿ ಪ್ರೇಮಾ ಕೃಷ್ಣ, ಪುತ್ರಿಯರು ಹಾಗೂ ಅಮಥ್ರ್ಯ ಅವರು ಸದಾಶಿವನಗರದಲ್ಲಿನ ಡಿಕೆಶಿ ಮನೆಗೆ ತೆರಳಿದ್ದಾರೆ. ಐಶ್ವರ್ಯ ಹಾಗೂ ಅಮಥ್ರ್ಯ ಅವರ ವಿವಾಹ ನಿಶ್ಚಿತಾರ್ಥದ ದಿನವನ್ನು ಇವತ್ತು ನಿಗದಿ ಮಾಡುತ್ತಾರೆ ಎಂಬ ಮಾಹಿತಿಯಿದೆ. ಕಾಂಗ್ರೆಸ್ಸಲ್ಲಿದ್ದಾಗ ಗುರು ಶಿಷ್ಯರಂತಿದ್ದ ಎಸ್.ಎಂ.ಕೃಷ್ಣ-ಡಿಕೆ ಶಿವಕುಮಾರ್ ಅವರು ಈಗಲೂ ಒಳ್ಳೆಯ ಬಾಂಧವ್ಯ ಇರಿಸಿಕೊಂಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೃಷ್ಣ ಬಿಜೆಪಿ ಸೇರಿದ್ದರು. ಅಳಿಯ ಸಿದ್ದಾರ್ಥ್ ಆತ್ಮಹತ್ಯೆ ಮಾಡಿಕೊಂಡಾಗ ಡಿಕೆಶಿ ಧೈರ್ಯ ತುಂಬಿದ್ದರು.