`ಡಾನ್’ ಪೂಜಾರಿ 10 ದಿನ ಸಿಸಿಬಿ ಕಸ್ಟಡಿಗೆ!

ಬೆಂಗಳೂರು: ಅಂಡರ್ ವಲ್ರ್ಡ್ ಡಾನ್ ರವಿ ಪೂಜಾರಿಯನ್ನು 10 ದಿನಗಳ ಕಾಲ ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಮಂಗಳೂರಿನಲ್ಲಿ ನಡೆದಿದ್ದ ವಕೀಲ ನೌಷಾದ್ ಹತ್ಯೆ ರವಿ ಪೂಜಾರಿ ಇಶಾರೆಯ ಮೇಲೆ ನಡೆದಿದೆ ಎನ್ನಲಾಗಿದ್ದು ಇದರ ತನಿಖೆಗಾಗಿ 10 ದಿನಗಳ ಕಾಲ ಸಿಸಿಬಿ ಪೊಲೀಸರ ತಂಡ ಪೂಜಾರಿಯನ್ನು ಕಸ್ಟಡಿಗೆ ಪಡೆದು ತನಿಖೆ ನಡೆಸುತ್ತಿದೆ.
ಡಿಜಿ- ಐಜಿಪಿ ಪ್ರವೀಣ್ ಸೂದ್ ವಕೀಲ ನೌಷಾದ್ ಹತ್ಯೆ ಕೇಸ್ ಅನ್ನು ಸಿಸಿಬಿ ತನಿಖೆಗೆ ವರ್ಗಾಯಿಸಿ ಆದೇಶಿಸಿದ್ದಾರೆ. ವಕೀಲ ನೌಷಾದ್ ದಾವೂದ್ ಬಂಟರಿಗೆ ಸಹಕಾರ ನೀಡುತ್ತಿದ್ದಾರೆ ಎಂಬ ಆರೋಪದಲ್ಲಿ ಡಾನ್ ರವಿ ಪೂಜಾರಿ ಕೆಲವು ಬಾರಿ ಬೆದರಿಕೆಯೊಡ್ಡಿದ್ದ. ವಿದೇಶದಲ್ಲಿ ಇದ್ದುಕೊಂಡೇ ತನ್ನ ಸಹಚರರ ಮೂಲಕ ರವಿ ಪೂಜಾರಿ ವಕೀಲರನ್ನು ಹತ್ಯೆ ಮಾಡಿಸಿದ್ದ.
ಸೆನೆಗಲ್ ನಲ್ಲಿ ಬಂಧಿತನಾದ ರವಿ ಪೂಜಾರಿ ಬಂಧನದ ಬಳಿಕ ಕೊಲೆಯ ಬಗ್ಗೆ ತಪ್ಪೊಪ್ಪಿಕೊಂಡಿದ್ದ. ರವಿ ಪೂಜಾರಿಯನ್ನು ಮಡಿವಾಳದ ಎಫ್ ಎಸ್ ಎಲ್ ನಲ್ಲಿ ಇಟ್ಟು ತನಿಖೆ ನಡೆಸಲಾಗುತ್ತಿದೆ. ಪೂಜಾರಿ ವಿರುದ್ಧ ಕೊಲೆ, ಸುಲಿಗೆ, ಡಕಾಯಿತಿ, ದರೋಡೆ, ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ. ಪೂಜಾರಿ ವಿರುದ್ಧ ಬೆಂಗಳೂರು, ಮಂಗಳೂರು ಸೇರಿ 200ಕ್ಕೂ ಹೆಚ್ಚು ಕೇಸ್ ಗಳು ದಾಖಲಾಗಿವೆ.

Leave a Reply

Your email address will not be published. Required fields are marked *