ಟಿಪ್ಪರ್ ಡಿಕ್ಕಿ: ಕಾರ್ ಚಾಲಕ ಮೃತ್ಯು
ಮಂಗಳೂರು: ಕಾರ್ ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಕಾರ್ ಚಾಲಕ ಮೃತಪಟ್ಟ ಘಟನೆ ಬೆಳುವಾಯಿ ಮಠದಕೆರೆ ಎಂಬಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಮೃತರನ್ನು ಕಾರ್ಕಳ ತಾಲೂಕಿನ ಜೋಡುಕಟ್ಟೆ ನಿವಾಸಿ ಸದಾನಂದ ಪೂಜಾರಿ(52) ಎಂದು ಗುರುತಿಸಲಾಗಿದೆ.
ಸದಾನಂದ ಪೂಜಾರಿ ಪತ್ನಿ ಜೊತೆಯಲ್ಲಿ ಬೆಳುವಾಯಿಯ ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ಬಂದಿದ್ದರು. ಬೆಳುವಾಯಿ ಕಡೆಯಿಂದ ಹಿಂದಿರುಗುವಾಗ, ಕಾರ್ಕಳದ ಕಡೆಯಿಂದ ಬಂದ ಟಿಪ್ಪರ್ ಸದಾನಂದ ಅವರು ಚಲಾಯಿಸುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಸದಾನಂದ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.