ಟಿಕ್‍ಸ್ಟಾರ್ ಸ್ಟಾರ್ ಸಿಯಾ ಆತ್ಮಹತ್ಯೆ

ಮುಂಬೈ: ಟಿಕ್‍ಟಾಕ್ ವೀಡಿಯೋಗಳ ಮೂಲಕ ಒಂದೂವರೆ ಲಕ್ಷಕ್ಕೂ ಅಧಿಕ ಫಾಲೋವರ್ಸ್‍ಗಳನ್ನು ಹೊಂದಿದ್ದ ಸಿಯಾ ಕಕ್ಕರ್ ಇದೀಗ ಆತ್ಮಹತ್ಯೆಗೆ ಶರಣಾಗಿದ್ದು, ಹಲವು ಅನುಮಾನಗಳನ್ನು ಮೂಡಿಸಿರುವ ಜೊತೆಗೆ ಅಭಿಮಾನಿಗಳಿಗೆ ಸಹಜವಾಗಿಯೇ ಆಘಾತ ತಂದಿದೆ.
16 ವರ್ಷದ ಸಿಯಾ ಟಿಕ್‍ಟಾಕ್ ವಿಡಿಯೋಗಳ ಮೂಲಕವೇ ಅಪಾರ ಫಾಲೋವರ್ಸ್ ಗಳನ್ನು ಹೊಂದಿದ್ದರು. ತಮ್ಮ ಡ್ಯಾನ್ಸ್, ಡಬ್ಬಿಂಗ್ ಮೂಲಕವೇ ಜನರಿಗೆ ಚಿರಪರಿಚಿತರಾಗಿದ್ದರು. ಈ ಕುರಿತು ಪೋಸ್ಟ್ ಮಾಡಿರುವ ವಿರಲ್ ಬಯಾನಿ, ಬುಧವಾರ ಸಂಜೆಯವರೆಗೂ ಆಕೆ ಚೆನ್ನಾಗಿದ್ದಳು. ಸಿಯಾ ಮ್ಯಾನೇಜರ್ ಅರ್ಜುನ್ ಸರಿನ್ ಜೊತೆ ಹಾಡಿನ ಬಗ್ಗೆ ಮಾತುಕತೆ ಆಗಿತ್ತು. ಆದ್ರೆ ಸಿಯಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಜೊತೆಯಲ್ಲಿಯೇ ಇರುತ್ತಿದ್ದ ಮ್ಯಾನೇಜರ್ ಅರ್ಜುನ್ ಗೂ ಈ ಬಗ್ಗೆ ಸುಳಿವು ಸಿಕ್ಕಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ಸಿಯಾ ಇನ್‍ಸ್ಟಾಗ್ರಾಮ್‍ನಲ್ಲಿ 10 ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದರು.