ಜ್ಯೂಸ್ ಕುಡಿದು ಹಣ ಕೊಡದ `ವೆಂಕಟ್’ಗೆ ಸ್ಥಳೀಯರ ಗೂಸಾ!

ಶ್ರೀರಂಗಪಟ್ಟಣ: ಕಳೆದೆರಡು ದಿನಗಳಿಂದ ನಗರದಾದ್ಯಂತ ಅಲೆದಾಡುತ್ತಿರುವ ಹುಚ್ಚ ವೆಂಕಟ್ ಇಂದು ಮಧ್ಯಾಹ್ನ ಕಬ್ಬಿನ ಜ್ಯೂಸ್ ಅಂಗಡಿಯಲ್ಲಿ ಜ್ಯೂಸ್ ಕುಡಿದು ಹಣ ಕೊಡದೆ ರಂಪಾಟ ಮಾಡಿದ್ದು ಈ ವೇಳೆ ಕೆರಳಿದ ಅಂಗಡಿ ಮಾಲಕ ಸ್ಥಳೀಯರ ಜೊತೆ ಸೇರಿ ಗೂಸಾ ನೀಡಿರುವ ಘಟನೆ ವರದಿಯಾಗಿದೆ.
ಶ್ರೀರಂಗಪಟ್ಟಣದ ದರಸಗುಪ್ಪೆ ಬಳಿ ಘಟನೆ ನಡೆದಿದ್ದು ಜ್ಯೂಸ್ ಹಣ ನೀಡದೆ ಹುಚ್ಚ ವೆಂಕಟ್ ಗಲಾಟೆ ಮಾಡಿದ್ದಾನೆ. ನಂತರ ಮುಂದುವರಿದು ಅಂಗಡಿಯವನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ವೆಂಕಟ್‍ಗೆ ಸಾರ್ವಜನಿಕರು ಹಲ್ಲೆ ಮಾಡಿದ್ದಾರೆ. ಹುಚ್ಚ ವೆಂಕಟ್ ಸದ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡವನಂತೆ ಮಂಡ್ಯ, ಶ್ರೀರಂಗಪಟ್ಟಣ ಮುಂತಾದೆಡೆಗಳಲ್ಲಿ ಅಲೆದಾಡುತ್ತಿದ್ದು ಆತನ ಮೇಲೆ ಸಾರ್ವಜನಿಕರು ಹಲ್ಲೆ ಮಾಡುತ್ತಿರುವ ಘಟನೆಗಳು ಜರುಗುತ್ತಿವೆ.

Leave a Reply

Your email address will not be published. Required fields are marked *