ಜೂ.15 ಪೋಲೀಸ್ ದೌರ್ಜನ್ಯ ಖಂಡಿಸಿ ಪ್ರತಿಭಟನೆ
ಬೆಂಗಳೂರು: 206ರ ರಾಷ್ಟ್ರೀಯ ಹೆದ್ದಾರಿ ಸಂತ್ರಸ್ತರ ಹೋರಾಟಗಾರ ರೈತರನ್ನು ಪೋಲೀಸರಿಂದ ರೌಡಿಶೀಟರ್ ಮಾಡಿಸುವ ಬೆದರಿಕೆ ಹಾಕುತ್ತಿದ್ದಾರೆ, ನಮಗೆ ರೌಡಿಶೀಟರ್ ಮಾಡುವುದಾದರೆ, ರೈತ ಹೋರಾಟಗಾರರೆನ್ನುವ ಮುಖ್ಯಮಂತ್ರಿ ಯಡಿಯ್ಯೂರಪ್ಪನವರನ್ನು ಮೊದಲು ರೌಡಿಶೀಟರ್ ಮಾಡಿ ಎಂದು ತಿಮ್ಲಾಪುರ ದೇವರಾಜು ಹೇಳಿದರು.
ನಗರದ ಎ.ಪಿ.ಎಂ.ಸಿಯ ರೈತ ಭವನದಲ್ಲಿ ಶನಿವಾರ ರಾಷ್ಟ್ರೀಯ ಹೆದ್ದಾರಿ 206 ಸಂತ್ರಸ್ತರ ಹೋರಾಟ ಸಮಿತಿ, ರೈತ ಕೃಷಿ ಕಾರ್ಮಿಕರ ಸಂಘಟನೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಪತ್ರಿಕಾಗೊಷ್ಟಿಯಲ್ಲಿ ಮಾತನಾಡಿದ ಅವರು ಕಳೆದ ಚುನಾವಣೆಯಲ್ಲಿ ಇದೇ ವಿಚಾರಗಳನ್ನು ಹಿಡಿದು ತಾಲೂಕಿನಲ್ಲಿ ಬಹುಮತ ಪಡೆದು ಗೆದ್ದ ಜನಪ್ರತಿನಿಧಿಗಳು ಇಂದು ನಪಂಸಕರಾಗಿದ್ದಾರೆ, ಇವರಿಗೆ ಮುಂದೆ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ ಎಂದರು.
ಹುಚ್ಚಗೊಂಡನಹಳ್ಳಿಯಲ್ಲಿ ನಡೆದ ಪೋಲೀಸರ ದೌರ್ಜನ್ಯವನ್ನು ಖಂಡಿಸಿ ಇದೇ ತಿಂಗಳ 15ರಂದು ಸೋಮವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಹುಚ್ಚಗೊಂಡನಹಳ್ಳಿಯಿಂದ ಕಾಲ್ನಡಿಗೆಯಲ್ಲಿ ಜಾಥ ಹೊರಟು ತಿಪಟುರಿನ ಎ.ಸಿ ಕಚೇರಿಯವರಗೆ ಹೋಗಲಾಗುವುದು. ಬೆಳಗ್ಗೆ 10.30 ಕ್ಕೆ ಹೊರಡುವ ಜಾಥಗೆ ಸಂತ್ರಸ್ಥರು ರೈತರು ಸಾಮನ್ಯ ಜನರು ಮಾಸ್ಕ್ ಧರಿಸಿ ದೈಹಿಕ ಅಂತರ ಕಾಪಾಡಿಕೊಂಡು ಬರಬೆಕಾಗಿ ಕರೆ ನೀಡಿದರು. ಪತ್ರಿಕಾ ಗೋಷ್ಟಿಯಲ್ಲಿ ಸಂತ್ರಸ್ಥ ರೈತರು ಭಾಗವಹಿಸಿದ್ದರು.