ಜು.28ರವರೆಗೆ ಬಿ.ಸಿ.ರೋಡ್-ಜಕ್ರಿಬೆಟ್ಟು ರಸ್ತೆ ಸಂಚಾರ ನಿಷೇಧ

ಮಂಗಳೂರು: ಬಿ.ಸಿ.ರೋಡ್-ಜಕ್ರಿಬೆಟ್ಟು ರಸ್ತೆಯ ಕಾಂಕ್ರೀಟ್ ಕಾಮಗಾರಿ ನಡೆಯುತ್ತಿದ್ದು ಇಂದಿನಿಂದ ಜುಲೈ 28ರವೆಗೆ ರಸ್ತೆ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಸಿಂಧೂ.ಬಿ ರೂಪೇಶ್ ಆದೇಶ ಹೊರಡಿಸಿದ್ದಾರೆ. ಕಾರ್, ಜೀಪ್, ಮಿನಿ ವ್ಯಾನ್, ದ್ವಿಚಕ್ರ ವಾಹನ, ಅಂಬ್ಯುಲೆನ್ಸ್ ವಾಹನಗಳು ಮಂಗಳೂರು, ಬಿ.ಸಿ.ರೋಡ್, ಬಂಟ್ವಾಳ ಪೇಟೆ-ಜಕ್ರಿಬೆಟ್ಟು ರಸ್ತೆಯನ್ನು ಬಳಸುವಂತೆ ಹಾಗೂ ಮೂಡಬಿದ್ರೆ ಬಂಟ್ವಾಳ ಬಿ.ಸಿ ರೋಡ್ ಕಡೆಗೆ ಸಂಚರಿಸುವ ವಾಹನಗಳು ಬದಲಿ ರಸ್ತೆಯಾಗಿ ಮೂಡಬಿದ್ರಿ ಬಂಟ್ವಾಳ ಜಂಕ್ಷನ್ ಮೂಲಕ ಜಕ್ರಿಬೆಟ್ಟು-ಬಂಟ್ವಾಳ ಪೇಟೆ-ಬಿ.ಸಿ.ರೋಡ್ ಕಡೆಗೆ ಚಲಿಸುವಂತೆ ಆದೇಶದಲ್ಲಿ ತಿಳಿಸಿಲಾಗಿದೆ.
ಮಂಗಳೂರು-ಗುರುವಾಯನಕೆರೆ ಕಡೆಗೆ ಸಂಚರಿಸುವ ಬಸ್ ಗಳಿಗೆ ಮಂಗಳೂರು-ಬಿ.ಸಿ ರೋಡ್ ಉಪ್ಪಿನಂಗಡಿ ಮುಖಾಂತರ ಕರಾಯ ಕಲ್ಲೇರಿ ಗುರುವಾಯನಕೆರೆ ಬದಲಿ ಮಾರ್ಗ ಹಾಗೂ ಗುರುವಾಯನಕೆರೆಯಿಂದ ಮಂಗಳೂರಿಗೆ ಬರುವ ಬಸ್ ಗಳು ಗುರುವಾಯನಕೆರೆ ಮುಖಾಂತರ ಕಲ್ಲೇರಿ-ಕರಾಯ ಉಪ್ಪಿನಂಗಡಿ ಮಾಣಿ ಬಿ.ಸಿ ರೋಡ್ ಮಂಗಳೂರು ಬಳಸುವಂತೆ ಆದೇಶದಲ್ಲಿ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಘನವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *