ಜಾನುವಾರು ವ್ಯಾಪಾರಿಯನ್ನು ಕಟ್ಟಿಹಾಕಿ ಹಲ್ಲೆಗೈದ ಸಂಘ ಪರಿವಾರದ ಗೂಂಡಾಗಳನ್ನು ತಕ್ಷಣ ಬಂಧಿಸಿ-ಎಸ್ ಡಿಪಿಐ ಆಗ್ರಹ

ಮಂಗಳೂರು: ಜಾನುವಾರು ವ್ಯಾಪಾರಿಯಾಗಿರುವ ಜೋಕಟ್ಟೆಯ ಮಹಮ್ಮದ್ ಹನೀಫ್ ಎಂಬವರು ದಾವಣಗೆರೆ, ರಾಣಿಬೆನ್ನೂರು ಮೊದಲಾದ ಕಡೆಗಳಿಂದ ಜಾನುವಾರುಗಳನ್ನು ಸಕ್ರಮವಾಗಿ ತಂದು ಅಧಿಕೃತ ದಾಖಲೆಗಳ ಮೂಲಕ ವ್ಯಾಪಾರ ಮಾಡುತಿದ್ದು ನಿನ್ನೆ ಬೆಳಿಗ್ಗೆ ಮಂಗಳೂರಿನ ಕುದ್ರೋಳಿ ಕಸಾಯಿಖಾನೆ ಗೆ ನಾಲ್ಕು ಎತ್ತುಗಳನ್ನು ಸಾಗಾಟ ನಡೆಸುತ್ತಿದ್ದ ಸಂದರ್ಭ ಉರ್ವಸ್ಟೋರ್ ಸಮೀಪದ ಇನ್ಫೋಸಿಸ್ ಬಳಿಯಲ್ಲಿ ಸಂಘ ಪರಿವಾರದ ಗೂಂಡಾಗಳು ವಾಹನವನ್ನು ತಡೆದು ಹನೀಫ್ ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ವಾಹನಕ್ಕೆ ಕಟ್ಟಿ ಹಾಕಿ, ವಾಹನಕ್ಕೂ ಹಾನಿ ಮಾಡಿ,ಲೂಟಿ ಮಾಡಿದ ಕೃತ್ಯನಡೆದಿದ್ದು ಇಂತಹ ಘಟನೆ ನಡೆಯುವುದನ್ನು ಸಹಿಸಲು ಅಸಾಧ್ಯ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರವಾಗಿ ಖಂಡಿಸಿದೆ.
ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಯುತ್ತಿದ್ದಂತೆ ಸ್ಥಳದಿಂದ ಸಂಘಪರಿವಾರದ ಗೂಂಡಾಗಳು ಪರಾರಿಯಾಗಿದ್ದಾರೆ.
ಪೋಲೀಸರ ಸಕಾಲಿಕ ಮಧ್ಯಪ್ರವೇಶದಿಂದ ದೊಡ್ಡ ದುರಂತ ತಪ್ಪಿಸಿದ್ದಾರೆ. ಜಿಲ್ಲೆಯಲ್ಲಿ ಅಶಾಂತಿಯನ್ನು ಸೃಷ್ಟಿಸಲು ವಾಹನಕ್ಕೆ ಕಟ್ಟಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ ಗೂಂಡಾಗಳನ್ನು ಪತ್ತೆಹಚ್ಚಿ ಬಂಧಿಸಿ ಕಠಿಣ ಕಾನೂನು ಜರಗಿಸಬೇಕಾದವರು ಅಧಿಕೃತ ದಾಖಲೆ ಮತ್ತು ಪರವಾನಿಗೆಯ ಮೂಲಕ ವ್ಯಾಪರ ನಡೆಸಿದ ಮಹಮ್ಮದ್ ಹನೀಫ್ ನ ಮೇಲೆ ಪ್ರಕರಣ ದಾಖಲಿಸಿರುವುದು ದುರದೃಷ್ಟಕರ.
ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ದನದ ವ್ಯಾಪರಿಗಳ ಮೇಲೆ ನಡೆಯುತ್ತಿದ್ದಂತಹ ದಾಳಿಗಳು ನಿಂತಿತ್ತು. ಇದೀಗ ಬಿಜೆಪಿ ಆಡಳಿತ ಬಂದ ನಂತರ ಮತ್ತೆ ಪುನರಾವರ್ತಿಸುತ್ತಿದೆ. ಇದನ್ನು ತಡೆಯಲು ಪೊಲೀಸ್ ಇಲಾಖೆ ಮುಂದೆ ಬರಬೇಕಾಗಿದೆ. ಮುಂದೆ ಬರುವ ಬಕ್ರೀದ್ ಹಬ್ಬಾಚರಣೆಯ ಸಂಧರ್ಭ ಧಾರ್ಮಿಕ ವಿಧಿ ನೆಲೆಯಲ್ಲಿ ಜಾನುವಾರುಗಳನ್ನು ಬಲಿ ಅರ್ಪಿಸುತಿರುವುದಕ್ಕೆ ತಡೆಯುವ ಇಂತಹ ಪುಂಡರನ್ನು ಜಿಲ್ಲಾಡಳಿತ ಹದ್ದುಬಸ್ತಿನಲ್ಲಿಡಬೇಕಾಗಿದೆ
ಇಲ್ಲದಿದ್ದಲ್ಲಿ ಮುಂದೆ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಯಾದರೆ ಪೊಲೀಸ್ ಇಲಾಖೆ ಸಹಿತ ಜಿಲ್ಲಾಡಳಿತ ನಿರ್ಲಕ್ಷ್ಯವೇ ಇದಕ್ಕೆ ಕಾರಣವಾಗಬಹುದು.
ಆದುದರಿಂದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಇಂದು ನಡೆದ ಘಟಣೆ ಮಾರಣಾಂತಿಕ ಹಲ್ಲೆ ,ಅಮಾನವೀಯ ಕ್ರತ್ಯದ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಜನರಗಿಸಬೇಕೆಂದು ಎಸ್ ಡಿಪಿಐ ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಸುಹೈಲ್ ಖಾನ್ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *