ಚೀನಾಗೆ ಪ್ರತೀಕಾರ ತೀರಿಸಲು ಸರ್ಕಾರಕ್ಕೆ ಕಾಯಬೇಡಿ: ಭಾರತೀಯ ಸೇನೆಗೆ ತುರ್ತು ಅಧಿಕಾರ ನೀಡಿದ ಕೇಂದ್ರ
ನವದೆಹಲಿ : ಲಡಾಖ್ ಪ್ರಾಂತ್ಯದ ಭಾರತ- ಚೀನಾ ಗಡಿಯ ಗಲ್ವಾನ್ ಕಣಿವೆಯಲ್ಲಿ ಯುದ್ಧ ಸನ್ನದ್ಧ ಸ್ಥಿತಿ ನೆಲೆಗೊಂಡಿರುವುದರಿಂದ ಭಾರತದ ಸೇನಾಪಡೆಗೆ ಮಹತ್ವದ ಸೂಚನೆಯನ್ನು ನೀಡಿದೆ.
ಚೀನಾ ಸಂಯಮ ಮೀರಿದರೆ ಸರ್ಕಾರದ ಆದೇಶಕ್ಕೆ ಕಾಯಬೇಕಾಗಿಲ್ಲ. ಅವರು ದಾಳಿ ನಡೆಸಲು ಮುಂದಾದರೆ ಪ್ರಬಲ ಪ್ರತೀಕಾರ ತೀರಿಸಿ ಎಂದು ಆದೇಶ ನೀಡಿದೆ.
ಲಡಾಖ್ನಲ್ಲಿ ಚೀನಾ , ಭಾರತದ ಸೈನಿಕರ ಘರ್ಷಣೆ ನಡೆದು ಭಾರತದ ಓರ್ವ ಸೇನಾಧಿಕಾರಿ ಸೇರಿ ಒಟ್ಟು 20 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಗಡಿಯಲ್ಲಿ ಬೆಂಕಿ ಮುಚ್ಚಿದ ವಾತಾವರಣವಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆಗೆ ಸರ್ಕಾರ ಸಂಪೂರ್ಣ ಪವರ್ ನೀಡಿದೆ.

ದಾಳಿಗೆ ಪ್ರತ್ಯುತ್ತರ ನೀಡಲು ಮೇಲಾಧಿಕಾರಿ ಅಥವಾ ಸರ್ಕಾರದ ಆದೇಶಕ್ಕೆ ಕಾಯುವಂತಹ ಅಗತ್ಯವಿಲ್ಲ . ತಕ್ಷಣವೇ ಗಡಿಯಲ್ಲಿ ದಾಳಿಗೆ ಪ್ರತ್ಯುತ್ತರವನ್ನು ನೀಡಿ ಎಂದು ಸರ್ಕಾರ ಹೇಳಿದೆ.
ಗಡಿಯಲ್ಲಿ ಹೈ ಅಲರ್ಟ್:
ಜಲಾಂತರ್ಗಾಮಿ ನೌಕೆ ನಿಯೋಜನೆಗೆ ನೌಕಪಡೆಗೆ ಹೈ ಅಲರ್ಟ್ ನಲ್ಲಿರಲು ಸೂಚನೆ ನೀಡಲಾಗಿದೆ. ಭೂ ಸೇನೆ , ವಾಯುಸೇನೆ , ನೌಕಾಪಡೆ ಯುದ್ಧಸನ್ನದ್ಧ ಆಗಿರುವಂತೆ ಸೂಚನೆ ನೀಡಲಾಗಿದೆ. ಚೀನಾದ ವಿರುದ್ಧ ಪ್ರತಿದಾಳಿಗೆ ಸಜ್ಜಾಗಿರುವಂತೆ ಆದೇಶ ನೀಡಲಾಗಿದೆ.
ಪರಿಸ್ಥಿತಿಯ ಲಾಭ ಪಡೆದುಕೊಂಡು ನೇಪಾಳ ಹಾಗೂ ಪಾಕ್ ಜಂಟಿಯಾಗಿ ದಾಳಿ ನಡೆಸುವ ಸಾಧ್ಯತೆ ಇದ್ದು ಏಕಕಾಲಕ್ಕೆ ಮೂರು ದೇಶಗಳನ್ನು ಎದುರಿಸುವ ಸ್ಥಿತಿಯೂ ಇದ್ದು, ಎಚ್ಚರಿಕೆ ವಹಿಸಲಾಗಿದೆ.