ಗಾಲ್ವಾನ್ ನದಿಯಲ್ಲಿ ತೇಲಿಬರುತ್ತಿದೆ ಸೈನಿಕರ ಶವಗಳು! ಪ್ರಧಾನಿ ಮೋದಿ ಮೌನಕ್ಕೆ ಕಾಂಗ್ರೆಸ್ ಕಿಡಿ!!
ಲಡಾಖ್: ಭಾರತ-ಚೀನಾ ಗಡಿಭಾಗ ಲಡಾಖ್ ನ ಗಾಲ್ವಾನ್ ನಲ್ಲಿ ಮೊನ್ನೆ ರಾತ್ರಿ ನಡೆದ ಭಾರತ -ಚೀನಾ ಸೈನಿಕರ ಮುಖಾಮುಖಿ ವೇಳೆ 20 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಸೇನೆ ಅಧಿಕಾರಿಗಳು ಹೇಳಿದ್ದಾರೆ. ಆದರೆ ಗಾಲ್ವಾನ್ ನದಿಯಲ್ಲಿ ಸೈನಿಕರ ಶವಗಳು ತೇಲಿ ಬರುತ್ತಿದೆ ಎನ್ನಲಾಗಿದ್ದು ಸಾವಿನ ಸಂಖ್ಯೆ ಹೆಚ್ಚುವ ಭೀತಿ ವ್ಯಕ್ತವಾಗಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಯಾವೊಂದು ಹೇಳಿಕೆ ನೀಡದೆ ಮೌನವಹಿಸಿರುವುದು ವಿಪಕ್ಷಗಳ ಟೀಕೆಗೆ ಗುರಿಯಾಗಿದೆ.
ಸೈನಿಕರ ಮುಖಾಮುಖಿಯಲ್ಲಿ ಚೀನಾದ 43 ಸೈನಿಕರು ಸತ್ತಿದ್ದಾರೆ ಎನ್ನಲಾಗುತ್ತಿದ್ದು ಅದಿನ್ನೂ ಚೀನಾ ಸೇನೆ ದೃಢಪಡಿಸಿಲ್ಲ. ಭಾರತೀಯ ಸೇನೆಯ ಕರ್ನಲ್ ಸಹಿತ ಮೂವರು ಸೈನಿಕರು ಹುತಾತ್ಮರಾದ ಬಗ್ಗೆ ಮೊದಲು ಸುದ್ದಿ ದೃಢಪಟ್ಟಿದ್ದು ನಂತರ 20 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಸೇನೆ ಹೇಳಿತ್ತು. ಈಗ 24ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಗಾಲ್ವಾನ್ ನದಿಗೆ ಜಿಗಿದ ಸೈನಿಕರಲ್ಲಿ 24 ಮಂದಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. ಕೊರೋನಾ ಲಾಕ್ ಡೌನ್ ನಿಂದಾಗಿ ದೇಶದ ಅರ್ಥ ವ್ಯವಸ್ಥೆ ಪಾತಾಳಕ್ಕೆ ಕುಸಿದಿದ್ದು ಈ ವೇಳೆ ಯುದ್ಧವಾದರೆ ಭಾರತಕ್ಕೆ ಖಂಡಿತ ಹಿನ್ನಡೆಯಾಗುತ್ತದೆ ಎಂಬ ನೆಲೆಯಲ್ಲಿ ಶಾಂತಿ ಮಾತುಕತೆಗೇ ಭಾರತ ಮುಂದಾಗಿದೆ ಎನ್ನಲಾಗುತ್ತಿದೆ. ಇನ್ನಿಂದೊಡೆ ಗಡಿಭಾಗದಲ್ಲಿ ಸೇನೆ ಜಮಾವಣೆ ಆಗುತ್ತಿದ್ದು ಯುದ್ಧದ ಕಾರ್ಮೋಡ ಹಬ್ಬಿದೆ. ಪ್ರಧಾನಿ ಮೋದಿ ಮೌನಕ್ಕೆ ಶರಣಾಗಿರುವುದೇಕೆ ಎಂದು ವಿಪಕ್ಷಗಳು ಕಟುವಾಗಿ ಟೀಕಿಸಿವೆ. ಒಂದು ವೇಳೆ ಈ ಸಂದರ್ಭದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.