`ಗಲ್ವಾನ್ ಕಣಿವೆ ನಮ್ಮದೇ…’ ಮತ್ತೆ ಭಾರತವನ್ನು ಕೆಣಕಿದ ಚೀನಾ!

ಲಡಾಖ್: ಪೂರ್ವ ಲಡಾಖ್ ಭಾಗದಲ್ಲಿರುವ ಗಲ್ವಾನ್ ಕಣಿವೆ ಪ್ರದೇಶ ಎಂದಿಗೂ ನಮ್ಮದೇ ಎಂದು ಚೀನಾ ಪುನರ್ ಉಚ್ಛರಿಸಿದ್ದು ಈ ಮೂಲಕ ಭಾರತವನ್ನು ಮತ್ತೆ ಬಹಿರಂಗವಾಗಿ ಕೆಣಕಿದೆ. ಚೀನಾ ಹಾಗೂ ಭಾರತದ ಮಧ್ಯೆ ಗಲ್ವಾನ್ ಕಣಿಯವೆಯಲ್ಲಿ ಕಳೆದೆರಡು ದಿನಗಳಿಂದ ಸೈನಿಕರ ಮಧ್ಯೆ ಘರ್ಷಣೆ ನಡೆಯುತ್ತಿದ್ದು ಭಾರತದ 20 ಸೈನಿಕರು ಹುತಾತ್ಮರಾಗಿದ್ದಾರೆ. ಚೀನಾ ದೇಶದ 43 ಮಂದಿ ಸೈನಿಕರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.

ಭಾರತೀಯ ಸೈನಿಕರು ನಿಯಮವನ್ನು ಉಲ್ಲಂಘಿಸಿ ಗಡಿ ದಾಟಿ ಬಂದಿದ್ದಾರೆ, ನಾವು ಕಮಾಂಡರ್ ಹಂತದಲ್ಲಿ ಬಗೆಹರಿಸಿಕೊಳ್ಳುತ್ತೇವೆ ಎಂದು ಚೀನಾ ವಿದೇಶಾಂಗ ಸಚಿವ ಝಾವೋ ಲಿಜಿಯನ್ ತಿಳಿಸಿದ್ದಾರೆ. ಹಾಗೆಯೇ ಘರ್ಷಣೆಯನ್ನು ಮುಂದುವರೆಸುವುದರಲ್ಲಿ ಅರ್ಥವಿಲ್ಲ ಎಂದೂ ಹೇಳಿದ್ದಾರೆ. ಕಳೆದ ಆರು ವಾರಗಳಿಂದ ಗಡಿ ವಿಚಾರವಾಗಿ ಎರಡೂ ದೇಶಗಳ ನಡುವೆ ಸಾಕಷ್ಟು ಬಾರಿ ಮಾತುಕತೆಗಳು ನಡೆದಿವೆ. ಚೀನಾ ಸೈನಿಕರೇ ನಿಯಮ ಉಲ್ಲಂಘಿಸಿದ್ದು ಭಾರತದ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಚೀನಾ ಗಲ್ವಾನ್ ಪ್ರದೇಶದಲ್ಲಿರುವ ಪ್ರದೇಶ ಎಂದಿಗೂ ಚೀನಾಕ್ಕೆ ಸೇರಿದ್ದು ಎಂದು ಹೇಳಿದೆ.

Leave a Reply

Your email address will not be published. Required fields are marked *