ಕ್ವಾರಂಟೈನ್ ನಿಂದ ಮನೆಗೆ ಬಂದ ಯುವಕನಿಗೆ ಕೊರೊನಾ ಪಾಸಿಟಿವ್! ಇನ್ನಾ ಗ್ರಾಮ ಸೀಲ್ ಡೌನ್

ಬೆಳ್ಮಣ್: ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಯುವಕನೋರ್ವನಿಗೆ ಕೋವಿಡ್-19 ಸೋಂಕು ದೃಢಪಟ್ಟಿರುವುದರಿಂದ ಇಲ್ಲಿನ ಕೆಲವು ಪ್ರದೇಶಗಳನ್ನು ಸೀಲ್ಡೌನ್ ಮಾಡಿದ್ದು, ಗ್ರಾಮಸ್ಥರು ಎಚ್ಚರದಿಂದ ಇರುವಂತೆ ಸೂಚಿಸಲಾಗಿದೆ.
ಮಹಾರಾಷ್ಟ್ರದಿಂದ ಆಗಮಿಸಿದ್ದ ಈತ ಹೆಬ್ರಿಯ ಕ್ವಾರಂಟೈನ್ ಕೇಂದ್ರದಲ್ಲಿದ್ದು, ಮೂರು ದಿನದ ಹಿಂದೆ ಈತ ಮನೆಗೆ ಆಗಮಿಸಿದ್ದ. ಅಂದರೆ ಕೋವಿಡ್ ಪರೀಕ್ಷೆ ವರದಿ ಜಿಲ್ಲಾಡಳಿತದ ಕೈಸೇರುವ ಮೊದಲೇ ಈತನನ್ನು ಕ್ವಾರಂಟೈನ್ನಿಂದ ಬಿಡುಗಡೆ ಮಾಡಲಾಗಿತ್ತು. ಮನೆಗೆ ಬಂದ ಈತ ಅನಂತರ ಇಲ್ಲಿ ಕೆಲವು ಕಡೆ ಓಡಾಡಿದ್ದ ಎನ್ನಲಾಗಿದೆ. ಶನಿವಾರ ರಾತ್ರಿ ಈತನಿಗೆ ಕೋವಿಡ್ ಪಾಸಿಟಿವ್ ಇರುವ ಬಗ್ಗೆ ದೃಢವಾಗಿದೆ. ಸದ್ಯ ಈತನನ್ನು ನಿಗದಿತ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಗ್ರಾಮದ ಮಡ್ಮಣ್, ಬಗ್ಗರಗುತ್ತು ಪ್ರದೇಶಗಳನ್ನು ಸೀಲ್ಡೌನ್ ಮಾಡಲಾಗಿದೆ.