ಕ್ಯಾಂಟೀನ್ ಮಾಲಕಿಯ ಮಗಳನ್ನೇ ಅತ್ಯಾಚಾರಗೈದ ಕಾಮುಕ! ಬಾಲಕಿ ಗರ್ಭಿಣಿ; ಪೋಕ್ಸೋ ಕೇಸ್ ನಲ್ಲಿ ಯುವಕ ಆರೆಸ್ಟ್!
ಉಳ್ಳಾಲ: ಯುವಕನೋರ್ವ ಅಪ್ರಾಪ್ತ ಬಾಲಕಿಯನ್ನು ನಿರಂತರ ಅತ್ಯಾಚಾರಗೈದ ಪರಿಣಾಮ ಆಕೆ ಗರ್ಭಿಣಿಯಾದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡ ಉಳ್ಳಾಲ ಪೊಲೀಸರು ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿದ್ದಾರೆ. ವಳಚ್ಚಿಲ್ ನಿವಾಸಿ ಲವಕುಮಾರ್ ಅಲಿಯಾಸ್ ಶ್ರವಣ್ ಬಂಧಿತ ಆರೋಪಿ.
ಆರೋಪಿ ಫಾಸ್ಟ್ ಫುಡ್ ಸೆಂಟರ್ ನಲ್ಲಿ ಕೆಲಸ ಮಾಡುತ್ತಿದ್ದು ಇದರ ಮಾಲಕಿಯ 16 ವರ್ಷ ಪ್ರಾಯದ ಪುತ್ರಿಯ ಮೇಲೆ ಕಾಮದ ಕಣ್ಣು ಬೀರಿದ್ದ. ಬಾಲಕಿಯ ಜೊತೆ ಸಲುಗೆ ಬೆಳೆಸಿದ್ದ ಕಾಮುಕ ಆಕೆಯನ್ನು ಪುಸಲಾಯಿಸಿ ನಿರಂತರ ಅತ್ಯಾಚಾರಗೈದಿರುವುದಾಗಿ ಆರೋಪಿಸಲಾಗಿದೆ. ಇದರಿಂದ ಬಾಲಕಿ ಗರ್ಭಿಣಿಯಾಗಿದ್ದು ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು.
ಬಾಲಕಿಯ ತಾಯಿ ತನ್ನ ಕ್ಯಾಂಟೀನ್ ಗೆ ದೂರದ ಪರಿಚಯದವನಾಗಿದ್ದ ಲವಕುಮಾರ್ ನನ್ನು ಕೆಲಸಕ್ಕೆ ಸೇರಿಸಿದ್ದರು. ಈತ ರಾತ್ರಿ ವೇಳೆ ಮಾಲಕಿಯ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದ ಎಂದು ತಿಳಿದು ಬಂದಿದೆ. ಈ ವೇಳೆ ಬಾಲಕಿಯ ಜೊತೆಗೆ ಸಲುಗೆ ಬೆಳೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ ಎಂದು ದೂರಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.