ಕೊರೋನಾ ಸೋಂಕಿನಿಂದ ಗುಣಮುಖರಾದರೂ 30 ದಿನ ಸೆಕ್ಸ್ ಗೆ “ನೋ” ಅನ್ನಿ…

ಲಂಡನ್: ನೀವು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಹೋದರೂ ಕನಿಷ್ಠ 30 ದಿನಗಳ ಕಾಲ ಸಂಗಾತಿಯಿಂದ ಅಂತರ ಕಾಯ್ದುಕೊಳ್ಳಿ. ಯಾಕೆಂದರೆ ಸೆಕ್ಸ್ ವೇಳೆ ಲಿಪ್ ಲಾಕ್ ಮಾಡಿದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಹೀಗೆಂದು ಚೀನಾದ ಅಧ್ಯಯನ ತಂಡವೊಂದು ನಡೆಸಿದ ರಿಸರ್ಚ್ ಆಧಾರದಲ್ಲಿ ಹೇಳಿದೆ.
ಅಪರಿಚಿತರೊಂದಿಗೆ ತಿರುಗಾಟ, ಸಂಪರ್ಕ ಬೆಳೆಸೋದು ಈ ದಿನಗಳಲ್ಲಿ ಅಪಾಯಕಾರಿ. ಜೋಡಿ ಒಂದೇ ಮನೆಯಲ್ಲಿ ವಾಸವಾಗಿದ್ರೆ ಸೆಕ್ಸ್ ನಡೆಸಬಹುದು ಎಂದು ಅಧ್ಯಾಯನ ಹೇಳಿದೆ. ಚೀನಾದ ಡಾ.ಜ್ಯಾಕ್ ಟರ್ಬನ್ ನೇತೃತ್ವದ ವಿದ್ಯಾರ್ಥಿಗಳ ತಂಡ ಲೈಂಗಿಕ ಕ್ರಿಯೆಯಿಂದ ಕೊರೊನಾ ಇನ್ನೊಬ್ಬರಿಗೆ ಹರಡುತ್ತದೆಯೇ ಎಂಬ ಬಗ್ಗೆ ಅಧ್ಯಯನ ನಡೆಸಿತ್ತು. ಇದಕ್ಕಾಗಿ ಗುಣಮುಖರಾದ 38 ಪುರುಷರ ವೀರ್ಯವನ್ನು ಸಂಗ್ರಹಿಸಿ ತಪಾಸಣೆಗೆ ಒಳಪಡಿಸಿತ್ತು. ಕೊರೊನಾದಿಂದ ಗುಣಮುಖರಾದ ಶೇ.16ರಷ್ಟು ಪುರುಷರ ವೀರ್ಯದಲ್ಲಿ ಕೊರೊನಾ ವೈರಸ್ ಸೋಂಕು ಇರೋದು ಬೆಳಕಿಗೆ ಬಂದಿದೆ.
ಕೊರೊನಾದಿಂದ ಗುಣಮುಖರಾದರೂ 30 ದಿನಗಳವರೆಗೆ ಸೆಕ್ಸ್ ನಿಂದ ದೂರವಿರಿ. ಲಿಪ್ ಲಾಕ್ ಮಾಡುವಾಗ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿರೋದರಿಂದ ಚುಂಬನದಿಂದ ದೂರಿವಿರಿ. 30 ದಿನಗಳ ನಂತರ ಕಾಂಡೋಮ್ ಬಳಸಿ ಸೆಕ್ಸ್ ಮಾಡಬಹುದು. ಕೊರೊನಾ ಸಮಯದಲ್ಲಿ ಗರ್ಭಧರಿಸೋದು ಕೂಡ ಅಪಾಯ ಎಂದು ಅಧ್ಯಯನ ವರದಿ ತಿಳಿಸಿದೆ.

Leave a Reply

Your email address will not be published. Required fields are marked *