ಕೊರೊನಾ ಅಟ್ಟಹಾಸ: ವಿಕಾಸ ಸೌಧದ 5 ರೂಂ ಸೀಲ್ ಡೌನ್!
ಬೆಂಗಳೂರು: ವಿಕಾಸ ಸೌಧದ ನೆಲಮಾಳಿಗೆಯಲ್ಲಿರುವ ಆಹಾರ ಇಲಾಖೆಯ ಮಹಿಳಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ 34ನೇ ರೂಂ ಸೇರಿದಂತೆ ಒಟ್ಟು ಐದು ರೂಂಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಕೂಡಲೇ ಜಾರಿಗೆ ಬರುವಂತೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಸಿಬ್ಬಂದಿಯಲ್ಲಿ ಕೋರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಲಾಖೆಯ ಎಲ್ಲಾ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲು ಆರೋಗ್ಯ ಇಲಾಖೆ ಸೂಚಿಸಿದೆ. ವಿಧಾನಸೌಧದಲ್ಲೂ ಭೀತಿ ಆವರಿಸಿದೆ. ವಿಕಾಸಸೌಧದ ಆಹಾರ ಇಲಾಖೆಯ ಕಚೇರಿಯಲ್ಲಿ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಪ್ರತಿನಿತ್ಯ ಅಸಂಖ್ಯ ಸಂಖ್ಯೆಯ ಜನರು ಭೇಟಿಕೊಡುತ್ತಿದ್ದು ಇವರೆಲ್ಲರ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಇದರಿಂದ ಆಹಾರ ಇಲಾಖೆಯ ಅಧಿಕಾರಿಗಳಿಗೂ ಕೊರೊನಾ ಭೀತಿ ಕಾಡತೊಡಗಿದೆ.