ಕೊರೊನಾದಿಂದ ನಾಲ್ಕು ತಿಂಗಳ ಮಗು ಚೇತರಿಕೆ

ವಿಶಾಖಪಟ್ಟಣ: ಕೊರೊನಾ ಸೋಂಕಿನಿಂದ ಕಳೆದ 18 ದಿನಗಳ ಕಾಲ ವೆಂಟಿಲೇಟರ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 4 ತಿಂಗಳ ಮಗು ಚೇತರಿಸಿಕೊಂಡಿದ್ದು ಮನೆಗೆ ಕಳುಹಿಸಲಾಗಿದೆ. ಮೇ 25ರಂದು ಮಗುವನ್ನು ಪೂರ್ವ ಗೋದಾವರಿ ಜಿಲ್ಲಾಸ್ಪತ್ರೆಯಿಂದ ವಿಶಾಖಪಟ್ಟಣದ ವಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ವೈದ್ಯರು ಇತ್ತೀಚೆಗೆ ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ವಿಮ್ಸ್ ಆಸ್ಪತ್ರೆ ವೈದ್ಯರು ನಿನ್ನೆ ಸಂಜೆ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ವಿನಯ್ ಚಂದ್ ಮಾಹಿತಿ ನೀಡಿದ್ದಾರೆ.
ವಿಶಾಖಪಟ್ಟಣದಲ್ಲಿ ಈಗ ಒಟ್ಟು 252 ಕೊರೊನಾ ಸೋಂಕಿತ ಪ್ರಕರಣಗಳಿವೆ. ಪೂರ್ವ ಗೋದಾವರಿ ಜಿಲ್ಲೆಯ ಬುಡಕಟ್ಟು ಮಹಿಳೆಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿತ್ತು. ಬಳಿಕ ಆಕೆಯ ಮಗುವನ್ನು ಪರೀಕ್ಷಿಸಿದಾಗ ಮಗುವಿಗೂ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆಂಧ್ರಪ್ರದೇಶದಲ್ಲಿ 5429 ಕೊರೊನಾ ಸೋಂಕಿತ ಪ್ರಕರಣಗಳಿದ್ದು, 3048 ಮಂದಿ ಗುಣಮುಖರಾಗಿದ್ದು, 80 ಮಂದಿ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *