ಕೊಡಗಿನಲ್ಲಿ 6 ಪ್ರದೇಶಗಳು ಸೀಲ್ ಡೌನ್!

ಮಡಿಕೇರಿ: ಇಷ್ಟು ದಿನ ಕೊರೊನಾ ನಿಯಂತ್ರಣದಲ್ಲಿದ್ದ ಕೊಡಗಿನಲ್ಲಿ ನಿನ್ನೆ ಮಹಾಮಾರಿ ಸೋಂಕಿನ ಪ್ರಕರಣ ತಾರಕಕ್ಕೇರಿದ್ದು, ಒಂದೇ ದಿನ 14 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದರಿಂದ ಕೊಡಗಿನ 6 ಏರಿಯಾಗಳನ್ನು ಬುಧವಾರ ರಾತ್ರಿ ಸೀಲ್‍ಡೌನ್ ಮಾಡಲಾಗಿದೆ.
ಮಡಿಕೇರಿ ನಗರದ ಓಂಕಾರೇಶ್ವರ ದೇವಾಸ್ಥಾನ ರಸ್ತೆ, ಪುಟಾಣಿ ನಗರ, ಡೇರಿ ಫಾರಂ, ಮಡಿಕೇರಿ ತಾಲೂಕಿನ ತಾಳತ್ ಮನೆ ಮತ್ತು ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮದ ಏರಿಯಾ ಒಂದನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ. ಏರಿಯಾಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಪೊಲೀಸ್ ನಿಯೋಜಿಸಲಾಗಿದೆ. ಈ ಮೂಲಕ ಜನರು ಸೀಲ್‍ಡೌನ್ ಏರಿಯಾಗಳಿಂದ ಜನರು ಹೊರ ಹೋಗದಂತೆ ಮತ್ತು ಹೊರಗಿನವರು ಒಳಗೆ ಬರದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ. ಒಟ್ಟಿನಲ್ಲಿ ಕೊಡಗಿನಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದ್ದು, ಜಿಲ್ಲೆಯ ಜನತೆಯಲ್ಲಿ ತೀವ್ರ ಆತಂಕ ಎದುರಾಗಿದೆ. ಕೊರೊನಾ ಮಹಾಮಾರಿ ವಿಚಾರಕ್ಕೆ ಸಂಬಂಧಿಸಿದಂತೆ ಉಳಿದ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಕೊಡಗಿನಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ನಾಗರಿಕರಲ್ಲಿ ನಿರಾಳತೆ ತಂದಿತ್ತು. ಆದರೆ ಬುಧವಾರದಿಂದ ಬೆಳಕಿಗೆ ಬಂದ ಪ್ರಕರಣ ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದೇ ಕಾರಣದಿಂದ ಆರು ಪ್ರದೇಶಗಳನ್ನು ಸೀಲ್‍ಡೌನ್ ಮಾಡಲಾಗಿದೆ.

Leave a Reply

Your email address will not be published. Required fields are marked *