ಕೊಡಗಿನಲ್ಲಿ ವ್ಯಾಪಕ ಮಳೆ: ಜಿಲ್ಲಾಡಳಿತ ಸನ್ನದ್ಧ

ಮಡಿಕೇರಿ: ಕೊಡಗಿನಲ್ಲಿ ನಿನ್ನೆಯಿಂದ ಮಳೆಯಾಗುತ್ತಿದ್ದು, ಮುಂಗಾರು ಆರಂಭದ ಲಕ್ಷಣ ಕಂಡುಬರುತ್ತಿದೆ. ಮಳೆ ಆರಂಭವಾಗಿರುವುದು ಜನರಲ್ಲಿ ಮಳೆಗಾಲದ ಅನಾಹುತದ ನೆನಪನ್ನು ಮತ್ತೆ ತಂದಿದೆ. 2018ರ ಮಳೆಗಾಲದಲ್ಲಿ ಸಂಭವಿಸಿದ ಭೂಕುಸಿತ ಕೊಡಗು ತಲ್ಲಣವಾಗುವಂತೆ ಮಾಡಿತ್ತು. 2019ರಲ್ಲಿ ಕೂಡ ಮಳೆಗಾಲದಲ್ಲಿ ಕೆಲವೆಡೆ ಭೂಕುಸಿತ, ಪ್ರವಾಹ ಸಂಭವಿಸಿ ಸಂಕಷ್ಟಕ್ಕೆ ತಳ್ಳಿತ್ತು. ಕಾವೇರಿ ನದಿಯಲ್ಲಿ ಮೇಲಿಂದ ಮೇಲೆ ಪ್ರವಾಹ ಬಂದಿತ್ತಲ್ಲದೆ, ನೂರಾರು ಎಕರೆ ಪ್ರದೇಶ ಜಲಾವೃತಗೊಂಡಿತ್ತು. ಈಗ ಮಳೆಯಾಗುತ್ತಿರುವುದರಿಂದ ಮತ್ತೆ ಅವೆಲ್ಲವೂ ಇಲ್ಲಿನ ಜನರಲ್ಲಿ ನೆನಪಾಗುತ್ತಿವೆ.
ಕಳೆದ ಎರಡು ವರ್ಷಗಳಿಂದಲೂ ಕೊಡಗಿನಲ್ಲಿ ಮಳೆಗಾಲದಲ್ಲಿ ಆಸ್ತಿ ಪಾಸ್ತಿ ನಷ್ಟ, ಸಾವು-ನೋವುಗಳು ಸಂಭವಿಸುತ್ತಲೇ ಇದೆ. ಭೂ ಕುಸಿತ, ಪ್ರವಾಹದ ಭೀತಿಯಿಂದ ಜನರು ಇನ್ನೂ ಹೊರಬಂದಿಲ್ಲ. ಇದೀಗ ಮುಂಗಾರು ಆರಂಭವಾಗುತ್ತಿದ್ದು, ಈ ಬಾರಿಯ ಮಳೆಗಾಲ ಇನ್ಯಾವ ರೀತಿಯ ಅನಾಹುತವನ್ನು ಸೃಷ್ಟಿ ಮಾಡಿಬಿಡುತ್ತದೆಯೋ ಎಂಬ ಭಯವಂತೂ ಜನರಲ್ಲಿ ಇದ್ದೇ ಇದೆ.
ಎನ್‌ಡಿಆರ್ ‌ಎಫ್ ತಂಡದಲ್ಲಿ ಕಮಾಂಡಿಂಗ್ ಅಧಿಕಾರಿ ಆರ್.ಕೆ.ಉಪಾಧ್ಯಾಯ ಅವರು ಸೇರಿದಂತೆ ಇಪ್ಪತೈದು ಮಂದಿ ಯೋಧರಿದ್ದು ಭೂಕುಸಿತ, ಪ್ರವಾಹ, ಕಟ್ಟಡ ಕುಸಿತ, ಪ್ರವಾಹ ಅಪಘಾತಗಳು ಮತ್ತಿತರ ಅವಘಡಗಳು ಸಂಭವಿಸಿದ್ದಲ್ಲಿ ತಕ್ಷಣವೇ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಚಟುವಟಿಕೆ ನಡೆಸಲಿದ್ದಾರೆ.

Leave a Reply

Your email address will not be published. Required fields are marked *