ಕೇರಳ-ದುಬೈ ವಿಮಾನ ಸಂಚಾರ ಆರಂಭಿಸುವಂತೆ ಕೇರಳ ಸಿಎಂ ಕೇಂದ್ರಕ್ಕೆ ಮನವಿ
ತಿರುವನಂತಪುರಂ: ಸಾಕಷ್ಟು ಮಂದಿ ಕೇರಳಿಗರು ದುಬೈನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ, ಕೆಲಸಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ದುಬೈಗೆ ವಿಮಾನ ಹಾರಾಟ ಆರಂಭಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪ್ರಯಾಣಿಕರಿಗೆ ಪಿಸಿಆರ್ ಪರೀಕ್ಷೆಯನ್ನು ಕೂಡ ಮಾಡಲಾಗುತ್ತದೆ. ದುಬೈನಲ್ಲೇ ವಾಸಿಸುವವರಿಗೆ ವಿದೇಶದಿಂದ ಬರಲು ಜೂನ್ 22ರಿಂದ ಅನುಮತಿ ನೀಡಿದೆ.
ಪ್ರವಾಸಿ ವೀಸಾದ ಮೇಲೆ ಪ್ರಯಾಣಿಸುವವರು ಜುಲೈ 7ರ ಬಳಿಕ ದುಬೈಗೆ ಬರಬಹುದು ಎಂದು ಮಾಹಿತಿ ನೀಡಿದೆ. ವಿದೇಶದಲ್ಲಿರುವ ತಮ್ಮ ಕುಟುಂಬದವರನ್ನು ಕಳೆದುಕೊಂಡವರಿಗೆ ಕೇಂದ್ರ ಸರ್ಕಾರವು ಪರಿಹಾರ ನೀಡಬೇಕು ಎಂದು ಯುಡಿಎಫ್ ನಾಯಕರು ಒತ್ತಾಯಿಸಿದ್ದಾರೆ.
ವಿಮಾನ ಹತ್ತಲು ನೋ ಕೊವಿಡ್ ಸರ್ಟಿಫಿಕೇಟ್ ಕಡ್ಡಾಯ ಎನ್ನುವ ನಿಯಮವನ್ನು ಕೇರಳ ಸರ್ಕಾರ ವಾಪಸ್ ತೆಗೆದುಕೊಳ್ಳಿ ಎಂದು ಪತ್ರ ಬರೆದಿದ್ದಾರೆ.