ಕೇರಳದ ಬಹುಕೋಟಿ ಉದ್ಯಮಿ ಶಾರ್ಜಾದಲ್ಲಿ ಕಟ್ಟಡದಿಂದ ಹಾರಿ ಆತ್ಮಹತ್ಯೆ

ಶಾರ್ಜಾ: ಕೇರಳ ಮೂಲದ ಎನ್ನಾರೈ ಉದ್ಯಮಿ ಅಜಿತ್ ತೆಯ್ಯಿಲ್ ಎಂಬವರು ಬಹುಮಹಡಿ ಕಟ್ಟಡವೊಂದರಿಂದ ಕೆಳಕ್ಕೆ ಹಾರಿ ಆತ್ಮಹತ್ಯೆಗೈದ ಪ್ರಕರಣ ಬೆಳಕಿಗೆ ಬಂದಿದೆ. ಅಜಿತ್ ಅವರು ಸ್ಪೇಸ್ ಸೊಲ್ಯೂಶನ್ಸ್ ಇಂಟರ್ ನ್ಯಾಷನಲ್ ಗ್ರೂಪ್ ನಿರ್ದೇಶಕರಾಗಿದ್ದರು. ಕಟ್ಟಡ ನಿರ್ಮಾಣ ಗುತ್ತಿಗೆದಾರ ಸಂಸ್ಥೆಯ ಮಾಲಕರಾಗಿದ್ದ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅಜಿತ್ ತೆಯ್ಯಿಲ್ ಅವರು ಕಣ್ಣೂರು ಜಿಲ್ಲೆಯಲ್ಲಿ ಬಹುದೊಡ್ಡ ಮನೆಯೊಂದನ್ನು ನಿರ್ಮಿಸುವ ಮೂಲಕ ಪ್ರಸಿದ್ಧರಾಗಿದ್ದರು.
ಕೇರಳದ ಉದ್ಯಮಿ ಜಾಯ್ ಅರಕ್ಕಲ್ ಅವರು ಎರಡು ತಿಂಗಳ ಹಿಂದೆ ಬಹುಮಹಡಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೈದಿದ್ದರು. ಅವರಿಗೆ ಹೇಳಿಕೊಳ್ಳುವಂತಹ ಆರ್ಥಿಕ ಸಮಸ್ಯೆ ಇರಲಿಲ್ಲ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳಿದ್ದಾರೆ. ಆದರೆ ಕೊರೊನಾದಿಂದಾಗಿ ವ್ಯವಹಾರದಲ್ಲಿ ನಷ್ಟ ಉಂಟಾಗಿತ್ತು ಎಂದು ಹೇಳಲಾಗುತ್ತಿದೆ.

Leave a Reply

Your email address will not be published. Required fields are marked *