ಕೃಷ್ಣಾಪುರ: ಈಜಲು ತೆರಳಿದ್ದ ಯುವಕ ದಾರುಣ ಮೃತ್ಯು
ಸುರತ್ಕಲ್: ಠಾಣಾ ವ್ಯಾಪ್ತಿಯ ಕಾಟಿಪಳ್ಳ ಕೃಷ್ಣಾಪುರ ಎಂಬಲ್ಲಿನ ಸಣ್ಣ ಕೆರೆಯಲ್ಲಿ ಈಜಲು ತೆರಳಿದ್ದ ಯುವಕ ಈಜು ಬಾರದೆ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ ತಾರನಾಥ್ ಎಂಬವರ ಪುತ್ರ ಸಂತೋಷ್(20) ಎಂದು ಹೆಸರಿಸಲಾಗಿದೆ.
ಸಂತೋಷ್ ಸ್ನೇಹಿತರ ಜೊತೆ ಇಂದು ಮಧ್ಯಾಹ್ನ ಕೃಷ್ಣಾಪುರ ಬಳಿಯ ಕೆರೆಯಲ್ಲಿ ಈಜಲು ತೆರಳಿದ್ದರು. ಈ ವೇಳೆ ನೀರುಪಾಲಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಸುರತ್ಕಲ್ ಠಾಣಾ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

