ಕಳೆದ 24 ಗಂಟೆಗಳಲ್ಲಿ 8 ಉಗ್ರರು ಹತ!
ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ಹಾಗೂ ಪಾಂಪೋರ್‍ನಲ್ಲಿ ಇಂದು ನಡೆದ ಎರಡು ಪ್ರತ್ಯೇಕ ಎನ್‍ಕೌಂಟರ್ ನಲ್ಲಿ 6 ಮಂದಿ ಉಗ್ರರು ಹತರಾಗಿದ್ದಾರೆ. ಈ ಮೂಲಕ ಕಳೆದ 24 ಗಂಟೆಯಲ್ಲಿ ನಡೆದಿರುವ ಕಾರ್ಯಾಚರಣೆಯಲ್ಲಿ ಒಟ್ಟು ಎಂಟು ಮಂದಿ ಉಗ್ರರನ್ನು ಹತ್ಯೆ ಮಾಡಿದಂತಾಗಿದೆ. ಪಾಂಪೋರ್‍ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿ ಮಸೀದಿಯೊಳಗೆ ಕೂಡಿಹಾಕಿದ್ದ ಇಬ್ಬರು ಉಗ್ರರನ್ನು ಹೊರಹಾಕಿದ್ದಾರೆ. ಭದ್ರತಾ ಪಡೆಗಳು ಶುಕ್ರವಾರ ಮಸೀದಿಯನ್ನು ಸುತ್ತುವರಿದು ಇಬ್ಬರನ್ನು ಉಗ್ರರನ್ನು ಕೊಂದಿದ್ದಾರೆ. ಈ ವೇಳೆ ಐಇಡಿಯನ್ನು ಬಳಸಲಾಗಿಲ್ಲ ಎಂದು ಕಾಶ್ಮೀರದ ಪೊಲೀಸ್ ಇನ್ಸ್‍ಪೆಕ್ಟರ್ ಜನರಲ್ ವಿಜಯಕುಮಾರ್ ಹೇಳಿದ್ದಾರೆ.
ಶೋಪಿಯಾನ್‍ನ ಮುನಾಂದ್ ಪ್ರದೇಶದಲ್ಲಿ ಇಂದು ನಡೆದ ಉಗ್ರರ ವಿರುದ್ಧ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರನ್ನು ಸಾಯಿಸಲಾಗಿದೆ. ಭದ್ರತಾ ಪಡೆಗಳು ಕಳೆದ ಎರಡು ವಾರಗಳಲ್ಲಿ ಜಮ್ಮು-ಕಾಶ್ಮೀರದಲ್ಲಿ ಎರಡು ಡಜನ್‍ಗೂ ಅಧಿಕ ಉಗ್ರರನ್ನು ಸಂಹಾರ ಮಾಡಿದ್ದಾರೆ.