ಕನ್ನಡ ಚಿತ್ರನಟ ಚಿರಂಜೀವಿ ಸರ್ಜಾ ಇನ್ನಿಲ್ಲ! ಹೃದಯಾಘಾತಕ್ಕೆ ಬಲಿ!!

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಚಿರಂಜೀವಿ ಸರ್ಜಾ ಅವರಿಗೆ ಇಂದು ಮಧ್ಯಾಹ್ನ ತೀವ್ರ ಉಸಿರಾಟದ ಸಮಸ್ಯೆ ಕಂಡುಬಂದಿದ್ದು ಅವರನ್ನು ತಕ್ಷಣ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಈ ಬಗ್ಗೆ ಆಸ್ಪತ್ರೆ ಇನ್ನಷ್ಟೇ ದೃಢ ಪಡಿಸಬೇಕಿದೆ. ಅಜಿತ್, ರುದ್ರ ತಾಂಡವ, ಅಮ್ಮ ಐ ಲವ್ ಯೂ, ವಾಯುಪುತ್ರ, ಸಿಂಗ, ಸೀಝರ್, ಶಿವಾರ್ಜುನ, ಆದ್ಯ, ಗಂಡೆದೆ, ಚಿರು ಮತ್ತಿತರ ಚಿತ್ರಗಳಲ್ಲಿ ಚಿರಂಜೀವಿ ಬಣ್ಣ ಹಚ್ಚಿದ್ದರು. ಚಿತ್ರನಟ ಅರ್ಜುನ್ ಸರ್ಜಾರ ಅಳಿಯನಾಗಿದ್ದಾರೆ. ಆಸ್ಪತ್ರೆಗೆ ನಿರ್ಮಾಪಕ ಕೆ. ಮಂಜು ಮತ್ತಿತರ ಗಣ್ಯರು ಭೇಟಿ ನೀಡಿದ್ದಾರೆ. ವರ್ಷದ ಹಿಂದಷ್ಟೇ ಹಿರಿಯ ನಟ ಸುಂದರ್ ರಾಜ್ ಅವರ ಮಗಳು ಮೇಘನಾ ರಾಜ್ ರನ್ನು ಮದುವೆಯಾಗಿದ್ದರು.