ಕಟೀಲು: ಮಹಿಳೆಗೆ ಕೊರೊನಾ ಪಾಸಿಟಿವ್! ಮನೆ ಸೀಲ್ ಡೌನ್!!

ಮಂಗಳೂರು: ಮಂಗಳೂರಿನ ಕ್ಲಿನಿಕ್ ಒಂದರಲ್ಲಿ ನರ್ಸ್ ಕೆಲಸ ಮಾಡುತ್ತಿದ್ದ ಕಟೀಲು ಸಮೀಪದ ಮಹಿಳೆಗೆ ಕೊರೊನಾ ಪಾಸಿಟಿವ್ ಕಂಡುಬಂದಿದ್ದು ಇದರಿಂದ ಪರಿಸರದ ಜನರಲ್ಲಿ ಆತಂಕ ಮನೆಮಾಡಿದೆ. ಕಟೀಲು ಬಲ್ಲಣ ಮಾರಡ್ಕ ಎಂಬಲ್ಲಿನ 35 ವರ್ಷ ಪ್ರಾಯದ ಮಹಿಳೆಯ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.
ವೈದ್ಯರಲ್ಲಿ ಪಾಸಿಟಿವ್ ಕಂಡು ಬಂದ ಕಾರಣ ಅಲ್ಲಿನ ಸಿಬ್ಬಂದಿಯನ್ನು ತಪಾಸಣೆ ನಡೆಸಿದಾಗ ಮಹಿಳೆಯಲ್ಲಿ ಪಾಸಿಟಿವ್ ಕಂಡುಬಂದಿದೆ. ಮನೆಯಲ್ಲಿ ಒಟ್ಟು ಏಳು ಮಂದಿ ವಾಸಿಸುತ್ತಿದ್ದು ಮನೆಯನ್ನು ಸೀಲ್ ಡೌನ್ ಮಾಡಿ ಮನೆಯಲ್ಲಿ ಇದ್ದವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಸ್ಥಳಕ್ಕೆ ಆಶಾ ಕಾರ್ಯಕರ್ತೆಯರು, ಮೂಲ್ಕಿ ಠಾಣಾಧಿಕಾರಿ ಜಯರಾಮ ಗೌಡ ಭೇಟಿ ನೀಡಿದ್ದಾರೆ. ಮಹಿಳೆಗೆ ಜ್ವರ ಕಾಣಿಸಿಕೊಂಡಿದ್ದು ಆಕೆ ಚಿಕಿತ್ಸೆಗಾಗಿ ಕಿನ್ನಿಗೋಳಿಯ ಆಸ್ಪತ್ರೆ ಸಹಿತ ನಾನಾ ಕಡೆ ಭೇಟಿ ನೀಡಿದ್ದು ಇದರಿಂದ ಆತಂಕ ಸೃಷ್ಟಿಯಾಗಿದೆ.