ಕಂಪೌಂಡ್ ವಾಲ್ ಕುಸಿದು ಮಗು ದಾರುಣ ಮೃತ್ಯು

ಮಂಗಳೂರು: ಮನೆಯ ಗೇಟ್ ಹಿಡಿದು ಆಟವಾಡುತ್ತಿದ್ದ ವೇಳೆ ಗೇಟ್ ಅಳವಡಿಸಲಾಗಿದ್ದ ಕಂಪೌಂಡ್ ಕುಸಿದು ಮೂರು ವರ್ಷ ಪ್ರಾಯದ ಮಗು ದಾರುಣ ಸಾವನ್ನಪ್ಪಿದ ಘಟನೆ ಇಂದು ಸಂಜೆ ಮುನ್ನೂರು ಗ್ರಾಮದ ಸಂತೋಷ್ ನಗರ ಮಸೀದಿ ಬಳಿ ನಡೆದಿದೆ. ಅಶ್ರಫ್ ಹಾಗೂ ಆಯೇಷಾ ದಂಪತಿ ಪುತ್ರ ಐಮಾನ್(3) ನತದೃಷ್ಟ ಮಗು.
ಮನೆಯ ಕಂಪೌಂಡ್ ಗೋಡೆಯ ಪಕ್ಕ ಗೇಟ್ನಲ್ಲಿ ಆಟವಾಡುತ್ತಿದ್ದ ವೇಳೆ ಶಿಥಿಲಗೊಂಡು ಮಳೆಗೆ ಬಲ ಕಳೆದುಕೊಂಡಿದ್ದ ಕಂಪೌಂಡ್ ಉರುಳಿಬಿದ್ದಿದೆ. ಇದರ ಪರಿಣಾಮ ಮಗು ಅಡಿಯಲ್ಲಿ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.