ಒಬ್ಬ ವಿದ್ಯಾರ್ಥಿಗಾಗಿ ಬಸ್ ಬಿಟ್ಟ ಕೆಎಸ್ಸಾರ್ಟಿಸಿ!

ಕಾರವಾರ: ವಿದ್ಯಾರ್ಥಿಯೊಬ್ಬ ಎಸ್ಸೆಸ್ಸೆಲ್ಸಿ ಪರೀಕ್ಷೆ ತಪ್ಪಿಸಬಾರದು ಎಂಬ ಕಾರಣಕ್ಕೆ ಸಾರಿಗೆ ಇಲಾಖೆ ಶಿರಸಿಯ ಒಬ್ಬ ವಿದ್ಯಾರ್ಥಿಗಾಗಿ ಒಂದು ಬಸ್ ಬಿಟ್ಟಿದ್ದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಶಿರಸಿಯಲ್ಲಿನ ಲಯನ್ಸ್ ಪರೀಕ್ಷಾ ಕೇಂದ್ರಕ್ಕೆ ನಿನ್ನೆ ಪರೀಕ್ಷೆ ಬರೆಯಲು ಕಾರವಾರದಿಂದ ವಿದ್ಯಾರ್ಥಿ ಶ್ರೀಧರ ಗೌಡ ಹೋಗಬೇಕಿತ್ತು. ಆದರೆ ಲಾಕ್ ಡೌನ್ ಇನ್ನೂ ಸಂಪೂರ್ಣ ಅನ್ ಲಾಕ್ ಆಗದೇ ಇರುವ ಕಾರಣದಿಂದ ವಿದ್ಯಾರ್ಥಿ ಸಮಸ್ಯೆಗೆ ಒಳಗಾಗಿದ್ದ.
ಇದನ್ನು ಅರಿಯ ಕೆಎಸ್ಸಾರ್ಟಿಸಿ ಒಬ್ಬ ವಿದ್ಯಾರ್ಥಿಗಾಗಿ ಒಂದು ಬಸ್ ವ್ಯವಸ್ಥೆ ಮಾಡಿದ್ದು ಆತನಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದೆ. ಸಾರಿಗೆ ಇಲಾಖೆಯ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.