ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ನಾಪತ್ತೆ
ಮಂಗಳೂರು: ಶಾಲೆಗೆ ಪರೀಕ್ಷೆ ಹಾಲ್ ಟಿಕೆಟ್ ಪಡೆಯಲೆಂದು ಮನೆಯಿಂದ ತೆರಳಿದ್ದ ವಿದ್ಯಾರ್ಥಿನಿ ನಾಪತ್ತೆಯಾದ ಘಟನೆ ನಗರದಲ್ಲಿ ನಡೆದಿದೆ. ಉತ್ತರ ಕರ್ನಾಟಕ ಮೂಲದ ಭೀಮವ್ವ ಅಲಿಯಾಸ್ ಸುಜಾತಾ(16) ನಾಪತ್ತೆಯಾದ ವಿದ್ಯಾರ್ಥಿನಿ.
ಸುಜಾತಾ ಕೆಂಪು ಬಣ್ಣದ ಚೂಡಿದಾರ ಧರಿಸಿದ್ದಳು. ಆಕೆ 5’1 ಎತ್ತರವಾಗಿದ್ದು, ಸಾಮಾನ್ಯ ಮೈಬಣ್ಣ ಹೊಂದಿದ್ದಾಳೆ. ಉದ್ದನೆಯ ಮುಖ ಹೊಂದಿದ್ದಾಳೆ. ಆಕೆ ಕನ್ನಡ ಹಾಗೂ ತುಳು ಭಾಷೆ ಬಲ್ಲವಳಾಗಿದ್ದಾಳೆ ಎನ್ನಲಾಗಿದೆ. ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.