ಎಲ್ಜಿ ಎಲೆಕ್ಟ್ರಾನಿಕ್ಸ್ ನಿಂದ ಪೊಲೀಸರಿಗೆ ಫೇಸ್ ಶೀಲ್ಡ್ ವಿತರಣೆ

ಮಂಗಳೂರು: ಗೃಹೋಪಕರಣ ಮಳಿಗೆಗಳಲ್ಲಿ ಹೆಸರುವಾಸಿಯಾಗಿರುವ ಎಲ್‍ಜಿಯಿಂದ ನಗರದ ಕೊರೊನಾ ವಾರಿಯರ್ಸ್ ಪೊಲೀಸ್ ಸಿಬ್ಬಂದಿಗಳಿಗೆ ಫೇಸ್ ಶೀಲ್ಡ್ ಅನ್ನು ವಿತರಣೆ ಮಾಡಲಾಯಿತು. ಕೊರೊನಾ ವಿರುದ್ಧ ಹೋರಾಟದಲ್ಲಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಫೇಸ್ ಶೀಲ್ಡ್ ವಿತರಿಸಿ ಮಾತಾಡಿದ ಮಂಗಳೂರು ಬ್ರಾಂಚ್ ಮಾರ್ಕೆಟಿಂಗ್ ಮೇನೇಜರ್ ಪ್ರಮೋದ್ ಕೆ. ಅವರು, ಎಲ್‍ಜಿ ಯಾವಾಗಲೂ ಜನರ ಆರೋಗ್ಯ ರಕ್ಷಣೆಯ ದೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಸದ್ಯ ಕೊರೊನಾ ವೈರಸ್ ಮಹಾಮಾರಿಯಿಂದ ಭಾರತ ಆತಂಕದ ಸ್ಥಿತಿಯನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಹೋರಾಡುವವರಿಗೆ ಈ ಮೂಲಕ ಸ್ಪಂದಿಸುತ್ತಿರುವುದು ಸಂತಸ ತಂದಿದೆ' ಎಂದು ಹೇಳಿದರು. ಈ ವೇಳೆ ಮಾತಾಡಿದ ಪೊಲೀಸ್ ಸಿಬ್ಬಂದಿ ಶರತ್ ಅವರುಎಲ್‍ಜಿ ಕೊರೊನಾ ವಿರುದ್ಧದ ನಮ್ಮೆಲ್ಲರ ಹೋರಾಟದಲ್ಲಿ ಈ ರೀತಿಯಾಗಿ ಸ್ಪಂದಿಸುವ ಮೂಲಕ ನಮಗೆ ಸಹಕಾರ ನೀಡುತ್ತಿರುವುದು ಸಂತಸ ತಂದಿದೆ’ ಎಂದರು. ಎಲ್‍ಜಿ ಕೊರೊನಾ ಲಾಕ್ ಡೌನ್ ಸಂದರ್ಭ ಅಕ್ಷಯಪಾತ್ರಾ ಫೌಂಡೇಶನ್ ಮೂಲಕ ಮಿಲಿಯನ್‍ನಷ್ಟು ವಲಸೆ ಕಾರ್ಮಿಕರಿಗೆ ಊಟ ಒದಗಿಸುವ ಮೂಲಕ ನೆರವಾಗಿದ್ದನ್ನು ಸ್ಮರಿಸಬಹುದಾಗಿದೆ.

Leave a Reply

Your email address will not be published. Required fields are marked *