ಎರಡನೇ ದಿನವೂ ಡೀಸೆಲ್, ಪೆಟ್ರೋಲ್ ಬೆಲೆಯೇರಿಕೆ

ನವದೆಹಲಿ: ನಿನ್ನೆ ಸತತ 83 ದಿನಗಳ ವಿರಾಮದ ಬಳಿಕ ದೇಶಾದ್ಯಂತ ಇಂಧನ ದರ ಪರಿಷ್ಕರಣೆಯಾಗಿದ್ದು ಏರಿಕೆ ಕಂಡಿತ್ತು. ಇಂದು ಮತ್ತೆ ತೈಲ ದರ ಮತ್ತಷ್ಟು ಏರಿಕೆ ದಾಖಲಿಸಿದೆ. ನಿನ್ನೆ ದೆಹಲಿಯಲ್ಲಿ ಪ್ರತೀ ಲೀಟರ್‍ಗೆ 71.86 ರೂ. ಇದ್ದ ಪೆಟ್ರೋಲ್ ಬೆಲೆ 60 ಪೈಸೆ ಏರಿಕೆಗೊಂಡು 72.46 ರೂ. ತಲುಪಿದೆ. ಡೀಸೆಲ್ ಬೆಲೆ ಕೂಡ 60 ಪೈಸೆ ಏರಿಕೆಗೊಂಡು 69.99 ರುಪಾಯಿಯಿಂದ 70.59 ರುಪಾಯಿಗೆ ಏರಿಕೆಯಾಗಿದೆ.