ಎಕ್ಕಾರ್: ತಂಡದಿಂದ ದಾಳಿ, ಯುವಕನ ಬರ್ಬರ ಹತ್ಯೆ!

ಮಂಗಳೂರು: ತಂಡವೊಂದು ಮೂವರು ಯುವಕರ ಮೇಲೆ ದಾಳಿ ನಡೆಸಿ ತಲವಾರಿನಿಂದ ಕಡಿದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು ಇನ್ನಿಬ್ಬರು ಗಂಭೀರ ಗಾಯಗೊಂಡ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಎಕ್ಕಾರ್ ದೇವರಗುಡ್ಡೆ ಎಂಬಲ್ಲಿ ತಡರಾತ್ರಿ ನಡೆದಿದೆ.ಹತ್ಯೆಗೀಡಾದ ಯುವಕನನ್ನು ಕಾವೂರು ಮರಕಡ ನಿವಾಸಿ ಕೀರ್ತನ್(20) ಎಂದು ಗುರುತಿಸಲಾಗಿದೆ. ಈತನ ಸ್ನೇಹಿತರಾದ ನಿತಿನ್(20), ಮಣೇಶ್(20) ಗಂಭೀರ ಗಾಯಗೊಂಡಿದ್ದು ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಜ್ಪೆ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳೀಯ ತಂಡವೊಂದು ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ReplyForward |