ಉಳ್ಳಾಲ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ್ದ ವ್ಯಕ್ತಿಯ ಶವ ಪತ್ತೆ

ಮಂಗಳೂರು : ಶುಕ್ರವಾರ ಸಂಜೆ 4.30 ರ ವೇಳೆಗೆ ಉಳ್ಳಾಲದ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ್ದ ತಲಪಾಡಿ ದೇವಿನಗರ ನಿವಾಸಿ ಸುರೇಂದ್ರ ರೈ(45) ಎಂಬವರ ಶವ ಇಂದು ಬೆಳಿಗ್ಗೆ ಪತ್ತೆಯಾಗಿದೆ.

ಸುರೇಂದ್ರ ಅವರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದರು, ಅವರಿಗೆ ವಿಪರೀತ ಕುಡಿತದ ಚಟವಿತ್ತು ಎನ್ನಲಾಗಿದೆ ಆದರೆ ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ.

ಶುಕ್ರವಾರ ನೇತ್ರಾವತಿ ಸೇತುವೆಯ ಮೇಲೆ ಫೋನ್ ಪತ್ತೆಯಾಗಿತ್ತು, ಇದನ್ನು ಕಂಡ ಸ್ಥಳೀಯರು ನದಿಗೆ ಯಾರೋ ವ್ಯಕ್ತಿ ಹಾರಿರಬೇಕೆಂದು ಶಂಕೆ ವ್ಯಕ್ತಪಡಿಸಿದ್ದರು, ಈ ವಿಚಾರವಾಗಿ ಕಂಕನಾಡಿ ಪೊಲೀಸರಿಗೆ ದೂರು ನೀಡಲಾಗಿತ್ತು, ಸ್ಥಳಕ್ಕೆ ಆಗಮಿಸಿದ ಕಂಕನಾಡಿ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೊಬೈಲ್ ವಶಕ್ಕೆ ತೆಗೆದುಕೊಂಡಿದ್ದರು.

ಆದರೆ ಇಂದು ಬೆಳಿಗ್ಗೆ ನದಿಯಲ್ಲಿ ವ್ಯಕ್ತಿಯ ಶವವೊಂದು ತೇಲುತಿದ್ದ ಸ್ಥಿತಿಯಲ್ಲಿ ಕಂಡುಬಂದಿದ್ದು ಉಳಿಯದ ಕಿಂಗ್ಸ್ ಸ್ಟಾರ್ ಸದಸ್ಯರು ಶವವನ್ನು ಮೇಲಕ್ಕೆತ್ತಿದ್ದಾರೆ.

ನಂತರ ಪರಿಶೀಲಿಸಿದಾಗ ಸೇತುವೆಯ ಮೇಲಿದ್ದ ಮೊಬೈಲ್ ಈ ವ್ಯಕ್ತಿಯದ್ದೇ ಎಂದು ಗೊತ್ತಾಗಿದೆ. ಸ್ಥಳಕ್ಕೆ ಕಂಕನಾಡಿ ಪೊಲೀಸರು ಆಗಮಿಸಿದ್ದಾರೆ.

Leave a Reply

Your email address will not be published. Required fields are marked *