ಉಳ್ಳಾಲ ಠಾಣೆಯ 6 ಪೊಲೀಸರಿಗೆ ಕೊರೋನಾ!

ಮಂಗಳೂರು: ಉಳ್ಳಾಲದಲ್ಲಿ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು ಇಂದು ಮತ್ತೆ ಉಳ್ಳಾಲ ಠಾಣೆಯ ಆರು ಮಂದಿ ಪೊಲೀಸರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಕೊರೊನಾ ಹರಡುವುದನ್ನು ತಡೆಯಲು ಕಾರ್ಯನಿರ್ವಹಿಸುತ್ತಿದ್ದ ಉಳ್ಳಾಲ ಠಾಣೆಯ ನಾಲ್ಕು ಮಂದಿ ಸಿಬ್ಬಂದಿಗಳಲ್ಲಿ ಹಿಂದೆ ಸೋಂಕು ದೃಢಪಟ್ಟಿತ್ತು. ಇಂದು ಮತ್ತೆ ಆರು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಠಾಣೆಯ ಓರ್ವ ಹೋಂ ಗಾರ್ಡ್ ಮತ್ತು ಐವರು ಪೊಲೀಸ್ ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಠಾಣೆಯನ್ನು ಭಾಗಶಃ ಸೀಲ್ ಡೌನ್ ಮಾಡಲಾಗಿದೆ. ಠಾಣೆಯಲ್ಲಿದ್ದ ಪ್ರಕರಣವೊಂದರ ಇಬ್ಬರು ಆರೋಪಿಗಳಲ್ಲೂ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ. ಉಳ್ಳಾಲದಲ್ಲಿ ಇದುವರೆಗೆ 47 ಮಂದಿಗೆ ಸೋಂಕು ತಗಲಿದ್ದು ಇಬ್ಬರು ಮೃತಪಟ್ಟಿದ್ದಾರೆ.