ಉಳ್ಳಾಲ ಠಾಣಾ ಎಎಸ್ಸೈಗೂ ಕೊರೊನಾ!

ಮಂಗಳೂರು: ಮೊನ್ನೆಯಷ್ಟೇ ಉಳ್ಳಾಳ ಠಾಣಾ ಪಿಎಸ್‍ಐ ಅವರಿಗೆ ಕೊರೊನಾ ಸೋಂಕು ಪಾಸಿಟಿವ್ ಕಂಡುಬಂದಿದ್ದು ಇಂದು ಠಾಣಾ ಎಎಸ್ಸೈ ಅವರಿಗೆ ಸೋಂಕು ಖಚಿತಪಟ್ಟಿದೆ. ಅವರನ್ನು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳ್ಳಾಲದಲ್ಲಿ ಕಳೆದೊಂದು ವಾರದಿಂದ ಐವರಲ್ಲಿ ಸೋಂಕು ಪತ್ತೆಯಾದಂತಾಗಿದೆ. ಇವರಲ್ಲಿ 57ರ ಹರೆಯದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಇದೀಗ ಸೋಂಕು ದೃಢಪಟ್ಟ ಎಎಸ್ಸೈ ಕಳೆದ ಕೆಲಸಮಯಗಳಿಂದ ಕರ್ನಾಟಕ-ಕೇರಳ ಗಡಿಭಾಗವಾದ ತಲಪಾಡಿ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆನ್ನಲಾಗಿದೆ. ಇದರಿಂದ ಸ್ಥಳೀಯವಾಗಿ ಆತಂಕ ಸೃಷ್ಟಿಯಾಗಿದೆ.

Leave a Reply

Your email address will not be published. Required fields are marked *