ಉಳ್ಳಾಲ ಕಡಲ್ಕೊರೆತಕ್ಕೆ ಮನೆ ಸಮುದ್ರಪಾಲು
ಮಂಗಳೂರು: ಭಾರೀ ಮಳೆಯಿಂದಾಗಿ ಉಳ್ಳಾಲ ಸೋಮೇಶ್ವರ ಕಡಲ ತೀರದಲ್ಲಿ ಮನೆಯೊಂದು ಸಂಪೂರ್ಣ ಸಮುದ್ರಪಾಲಾದ ಘಟನೆ ನಡೆದಿದೆ. ಕಳೆದ ಬಾರಿ ಮಳೆಗಾಲದಲ್ಲಿ ಕಡಲ್ಕೊರೆತ ಉಂಟಾಗಿ ಇದೇ ಮನೆಗೆ ಭಾಗಶ: ಹಾನಿಗೀಡಾಗಿತ್ತು. ಮೋಹನ್ ಎಂಬವರ ಮನೆಯ ಒಂದು ಗೋಡೆ ಸಮುದ್ರದ ಅಲೆಗಳು ಅಪ್ಪಳಿಸಿ ನೀರುಪಾಲಾಗಿದೆ. ಕಳೆದ ವರ್ಷ ಅಲೆಗಳ ಹೊಡೆತಕ್ಕೆ ಸಿಲುಕಿ ಭಾಗಶಃ ಹಾನಿಗೀಡಾಗಿದ್ದ ಮನೆ ತೀವ್ರಗೊಂಡ ಕಡಲ್ಕೊರೆತದಿಂದ ಸಂಪೂರ್ಣ ಕಡಲುಪಾಲಾಗಿದೆ. ಉಳ್ಳಾಲ, ಸೋಮೇಶ್ವರ ಭಾಗದಲ್ಲಿ ಸಮುದ್ರದ ಅಲೆಗಳು ರಕ್ಕಸ ಗಾತ್ರದಲ್ಲಿ ದಡಕ್ಕೆ ಬಡಿಯುತ್ತಿದ್ದು ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ.