ಉಳ್ಳಾಲದಲ್ಲಿ ಮಿತಿಮೀರಿದ ಕೊರೊನಾ: ರ್ಯಾಂಡಮ್ ಟೆಸ್ಟ್ ಆರಂಭ
ಮಂಗಳೂರು: ಉಳ್ಳಾಲ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು, ಈ ಹಿನ್ನೆಲೆಯಲ್ಲಿ ರ್ಯಾಂಡಮ್ ಟೆಸ್ಟ್ ಮಾಡಲು ಆರಂಭಿಸಲಾಗಿದೆ.
ಉಳ್ಳಾಲ ಶಾಸಕರಾದ ಯು.ಟಿ.ಖಾದರ್ ಅವರು ರ್ಯಾಂಡಮ್ ಟೆಸ್ಟ್ ಗೆ ಸೂಚನೆ ನೀಡಿದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಉಳ್ಳಾಲ ನಗರಸಭೆಯ ಬಳಿಯ ಮಹಾತ್ಮಗಾಂಧಿ ರಂಗಮಂದಿರದಲ್ಲಿ ರ್ಯಾಂಡಮ್ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ಆರಂಭದಲ್ಲಿ ರಿಕ್ಷಾ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ನಾಗರಿಕರಿಗೆ ರ್ಯಾಂಡಮ್ ಟೆಸ್ಟ್ ಮಾಡಲಾಗುತ್ತಿದೆ.
ಇದರ ಜೊತೆ ಉಳ್ಳಾಲ ನಗರಸಭೆ, ಪ್ರಾಥಮಿಕ ಆರೋಗ್ಯ ಕೇಂದ್ರ ಉಳ್ಳಾಲ ವತಿಯಿಂದ ಟೆಸ್ಟ್ಮಾಡಲಾಗುತ್ತದೆ. ಉಳ್ಳಾಲ ಮತ್ತು ಪೆರ್ಮನ್ನೂರು ಗ್ರಾಮ ವ್ಯಾಪ್ತಿಯ ನಾಗರಿಕರಿಗೆ ಟೆಸ್ಟ್ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ.
ಇಂದು ಸಂಜೆ 5 ಗಂಟೆಯವರೆಗೆ ರ್ಯಾಂಡಮ್ ಟೆಸ್ಟ್ ನಡೆಯಲಿದೆ.