ಉಪ್ಪಿನಂಗಡಿ: ಮೀನು ವ್ಯಾಪಾರಿ ಜೊತೆ ಪಿಡಿಒ ದರ್ಪ, ಹಿಂದೂ ಸಂಘಟನೆಗಳ ಪ್ರತಿಭಟನೆ

ಮಂಗಳೂರು: ಉಪ್ಪಿನಂಗಡಿ ನಿವಾಸಿ ಅಶೋಕ್ ಶೆಟ್ಟಿ ಎಂಬವರು ಇತ್ತೀಚೆಗೆ ಪೇಟೆಯ ಗಾಂಧಿಪಾರ್ಕ್ ಪರಿಸರದಲ್ಲಿ ಗೂಡ್ಸ್ ರಿಕ್ಷಾದಲ್ಲಿ ಹೊಸದಾಗಿ ಮೀನು ವ್ಯಾಪಾರ ಆರಂಭಿಸಿದ್ದು ಇಂದು ವ್ಯಾಪಾರದಲ್ಲಿ ನಿರತರಾಗಿದ್ದ ವೇಳೆ ಸ್ಥಳಕ್ಕಾಗಮಿಸಿದ ಉಪ್ಪಿನಂಗಡಿ ಪಂಚಾಯತ್ ಪಿಡಿಒ ವಾಹನದ ಕೀ ಕಿತ್ತು ದರ್ಪ ಮೆರೆದ ಘಟನೆ ನಡೆದಿದೆ.

ಇದನ್ನು ಖಂಡಿಸಿ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ಜನಸಾಮಾನ್ಯರ ಜೊತೆ ಅಧಿಕಾರ ದರ್ಪದಿಂದ ವರ್ತಿಸಿದ ಪಿಡಿಒ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.
ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಹಿಂದೂ ಸಂಘಟನೆ ಯುವಕರು ಜಮಾಯಿಸಿ ಪಿಡಿಒ ಕಾರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.