ಉಡುಪಿ-45, ದ.ಕ.-3 ಮಂದಿಗೆ ಕೊರೊನಾ ಪಾಸಿಟಿವ್!

ಮಂಗಳೂರು: ಇಂದು ಮತ್ತೆ ಉಡುಪಿ ಜಿಲ್ಲೆಯಲ್ಲಿ 45 ಮಂದಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರು ಮಂದಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿದೆ. ಇವರನ್ನು ಆಯಾ ಜಿಲ್ಲೆಗಳ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೊನಾ ಸೋಂಕಿತರು ಮಹಾರಾಷ್ಟ್ರ ಲಿಂಕ್ ಹೊಂದಿದ್ದು ಕ್ವಾರಂಟೈನ್‍ನಲ್ಲಿದ್ದಾಗ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ. ಇಂದು ರಾಜ್ಯದಲ್ಲಿ 308 ಕೊರೊನಾ ಕೇಸ್ ಪತ್ತೆಯಾಗಿದ್ದು ಈ ಮಧ್ಯೆ ಇಂದಿನಿಂದ ರಾಜ್ಯದಲ್ಲಿ ರೆಸ್ಟೋರೆಂಟ್, ದೇವಸ್ಥಾನಗಳನ್ನು ತೆರೆಯಲು ಸರಕಾರ ಅವಕಾಶ ನೀಡಲಾಗಿದೆ.

Leave a Reply

Your email address will not be published. Required fields are marked *