ಉಡುಪಿ ಕರಾವಳಿ ಬೈಪಾಸ್ ಗೆ “ಪೇಜಾವರ ಶ್ರೀ” ಹೆಸರು!

ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಫ್ಲೈ ಓವರ್, ಸೇತುವೆ, ಮೈದಾನಗಳಿಗೆ ಹೊಸ ನಾಮಕರಣ ಮಾಡುವ ಹುಚ್ಚಾಟ ಸೋಂಕಿನಂತೆ ಉಡುಪಿಗೂ ಕಾಲಿಟ್ಟಿದೆ. ಇಲ್ಲಿನ ಕರಾವಳಿ ಬೈಪಾಸ್ ಬಳಿಯ ಮೇಲ್ಸೆತುವೆ ಸಮೀಪ ಪೇಜಾವರ ಶ್ರೀಗಳ ಹೆಸರನ್ನು ಬರೆದ ಬ್ಯಾನರ್ ಪತ್ತೆಯಾಗಿದೆ.
ಉಡುಪಿಯ ಕರಾವಳಿ ಬೈಪಾಸ್ ಮೇಲ್ಸೇತುವೆಗೆ ಪೇಜಾವರ ಶ್ರೀಗಳ ಹೆಸರು ನಾಮಕರಣ ಮಾಡಲಾಗಿದೆ. ಉಡುಪಿಯ ರಾಷ್ಟ್ರೀಯ ಹೆದ್ದಾರಿ 66ರ ಕರಾವಳಿ ಬೈಪಾಸ್ ಬಳಿ ಈ ಮೇಲ್ಸೇತುವೆ ಇದೆ. ಬ್ಯಾನರ್ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ಇಲ್ಲ. ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಸಾರ್ವಕರ್ ಹೆಸರಿನ ವಿವಾದದಂತೆ ಉಡುಪಿಯಲ್ಲೂ ಸಹಾ ಅಪರಿಚಿತರು ಸ್ವಾಮೀಜಿಯ ಹೆಸರಿನ ಬ್ಯಾನರ್ ಅಳವಡಿಸಿದ್ದಾರೆ ಎನ್ನಲಾಗುತ್ತಿದೆ.