ಉಗ್ರ ದಾಳಿ ಭೀತಿ: ದೆಹಲಿಯಲ್ಲಿ ಹೈ ಅಲರ್ಟ್!

ನವದೆಹಲಿ: ಉಗ್ರರು ರಾಜಧಾನಿ ದೆಹಲಿಯನ್ನು ಟಾರ್ಗೆಟ್ ಮಾಡಿಕೊಂಡು ದಾಳಿ ಸಂಘಟಿಸುವ bagge ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ದೆಹಲಿಯ ಗಡಿ ಭಾಗಗಳಲ್ಲಿ ಉಗ್ರರು ಒಳನುಸುಳುವ ಸಾಧ್ಯತೆಯಿದ್ದು ಈ ನಿಟ್ಟಿನಲ್ಲಿ ವಾಹನಗಳನ್ನು ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಮಾರುಕಟ್ಟೆ, ಆಸ್ಪತ್ರೆ ಹಾಗೂ ಜನಸಂದಣಿ ಇರುವಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. 4ರಿಂದ 5 ಮಂದಿ ಉಗ್ರರು ದೆಹಲಿ ಪ್ರವೇಶಿಸಿದ್ದಾರೆ ಎಂದು ಗುಪ್ತಚರ ಇಲಾಖೆಯ ಮಾಹಿತಿ ನೀಡಿದ್ದು ಉಗ್ರರ ಪತ್ತೆಗಾಗಿ ಎಲ್ಲೆಡೆ ನಾಕಾಬಂದಿ ನಡೆಸಲಾಗುತ್ತಿದೆ.

Leave a Reply

Your email address will not be published. Required fields are marked *