ಇಂದು ಮತ್ತು ನಾಳೆ ಕಾಂಚನಾ ಹುಂಡಾೈ ವತಿಯಿಂದ ಬೃಹತ್ ಸಾಲ ಮತ್ತು ವಿನಿಮಯ ಮೇಳ

ಮಂಗಳೂರು: ವಾಹನ ಮಾರಾಟ ಮತ್ತು ಸೇವೆಯಲ್ಲಿ ಕರಾವಳಿಯಾದ್ಯಂತ ಹೆಸರಾಗಿರುವ ಕಾಂಚನ ಸಮೂಹದ ಅಂಗಸಂಸ್ಥೆಯಾದ ಕಾಂಚನಾ ಹುಂಡಾೈ ಗ್ರಾಹಕರ ಅಪೇಕ್ಷೆಯ ಮೇರೆಗೆ ಮತ್ತೊಮ್ಮೆ ಬೃಹತ್ ಸಾಲ ಮತ್ತು ವಿನಿಮಯ ಮೇಳ ಆಯೋಜಿಸಿದೆ. ಇಂದು ಮತ್ತು ನಾಳೆ ಮಂಗಳೂರಿನ ಪಡೀಲ್, ಉಡುಪಿ, ಪುತ್ತೂರು, ಕುಂದಾಪುರ, ಶಿರಸಿ, ಕಾರವಾರ, ಕಾರ್ಕಳ, ಕುಮಟಾ ಹಾಗೂ ಸುರತ್ಕಲ್‍ನಲ್ಲಿರುವ ಹುಂಡಾೈ ಮೋಟಾರ್ಸ್‍ರವರ ಅಧಿಕೃತ ಡೀಲರ್ ಕಾಂಚನಾ ಹುಂಡಾೈನ ಎಲ್ಲಾ ಮಳಿಗೆಗಳಲ್ಲಿ ಈ ಸಾಲಮೇಳ ಹಾಗೂ ವಿನಿಮಯ ಮೇಳ ನಡೆಯಲಿದೆ. ತಮ್ಮ ಗ್ರಾಹಕರ ಸುರಕ್ಷತೆ ಹಾಗೂ ಸುರಕ್ಷಿತ ಅಂತರ ಕಾಯ್ದುಕೊಂಡು ಪ್ರಯಾಣಿಸಲು ಹುಂಡಾೈನ ವಾಹನವನ್ನು ಖರೀದಿಸಲು ಕಾಂಚನಾ ಹುಂಡಾೈ ಸುವರ್ಣಾವಕಾಶ ಕಲ್ಪಿಸಿದೆ. ಈಗಾಗಲೇ ಹುಂಡಾೈ ಸಂಸ್ಥೆಯಿಂದ ಹೊಸ ಬಿಎಸ್.6 ತಂತ್ರಜ್ಞಾನದೊಂದಿಗೆ ಬಿಡುಗಡೆಯಾದ ಹುಂಡಾೈ ಕ್ರೆಟಾ ಪ್ರಸಂಶೆಗೆ ಪಾತ್ರವಾಗಿದೆ. ಮೆಗಾ ಮಾನ್ಸೂನ್ ಆಫರ್ ಪ್ರಯುಕ್ತ ಸ್ಯಾಂಟ್ರೊಗೆ ರೂ. 40,000/-, ಗ್ರಾಂಡ್ ಐ10 ಗೆ ರೂ. 60,000/-, ಗ್ರಾಂಡ್ ಐ10 ನಿಯೋಸ್‍ಗೆ ರೂ. 25,000/-, ಇಲಿಟ್ ಐ20ಗೆ ರೂ. 35,000/-, ಎಲಾಂಟ್ರಗೆ ರೂ. 1,00,000/- ದಷ್ಟು ಕೊಡುಗೆಗಳಿವೆ. ಈ ಕೊಡುಗೆಯು 30-6-2020ಕ್ಕೆ ಸೀಮಿತವಾಗಿದೆ. ಮೆಗಾ ಮನ್ಸೂನ್ ಆಫರ್ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಸೆಕೆಂಡ್ ಹ್ಯಾಂಡ್ ಡೀಲರ್‍ಗಳ ಉಪಸ್ಥಿತಿಯೊಂದಿಗೆ ನಿಮ್ಮ ಹಳೆಯ ಹುಂಡಾೈ ವಾಹನಗಳಿಗೆ ಅತೀ ಹೆಚ್ಚಿನ ವಿನಿಮಯ ದರ ನೀಡಲಾಗುವುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.
ಕಾಂಚನಾ ಹುಂಡಾೈ 2006ರಲ್ಲಿ ಹುಂಡಾೈ ಮೋಟರ್ ಇಂಡಿಯಾ ಲಿ. ನ ಕಾರುಗಳ ಅಧಿಕೃತ ಡೀಲರ್ ಆಗಿ ಕರಾವಳಿ ಕರ್ನಾಟಕದಲ್ಲಿ ತನ್ನ ಕಾರ್ಯಾಚರಣೆಯನ್ನು ಕಳೆದ 13 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯು ಪ್ರತಿ ವರ್ಷವೂ 3000ಕ್ಕೂ ಮಿಗಿಲಾಗಿ ಹ್ಯೂಂಡಾಯ್ ಕಾರುಗಳನ್ನು ಮಾರಾಟ ಮಾಡುತ್ತಿದೆ. ಉಡುಪಿಯಲ್ಲಿ ಮುಖ್ಯ ಕಚೇರಿ, ಮಂಗಳೂರಿನಲ್ಲಿ ಕಾರ್ಪೊರೇಟ್ ಕಚೇರಿ ಮತ್ತು ಪುತ್ತೂರು, ಕುಂದಾಪುರ, ಶಿರಸಿ, ಕಾರವಾರ, ಕಾರ್ಕಳ, ಕುಮಟಾ ಹಾಗೂ ಸುರತ್ಕಲ್‍ನಲ್ಲಿ ಸುಸಜ್ಜಿತ ಮಳಿಗೆ ಹಾಗೂ ಸರ್ವಿಸ್ ಸೆಂಟರ್‍ಗಳನ್ನು ಹೊಂದಿದೆ.

Leave a Reply

Your email address will not be published. Required fields are marked *