ಸಚಿವ ಸುಧಾಕರ್ ಮನೆ ಕೆಲಸದಾಳಿಗೆ ಕೊರೊನಾ! ತಂದೆಯಲ್ಲೂ ಕೊರೊನಾ ಲಕ್ಷಣ ಪತ್ತೆ!
ಬೆಂಗಳೂರು: ಸಚಿವ ಕೆ.ಸುಧಾಕರ್ ಅವರ ಮನೆಯ ಕೆಲಸದಾಳುವಿಗೆ ಕೊರೊನಾ ಪಾಸಿಟಿವ್ ಆಗಿದ್ದು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಧಾಕರ್ ಅವರ 82 ವರ್ಷ ಪ್ರಾಯದ ತಂದೆಯ ಆರೋಗ್ಯದಲ್ಲೂ ಏರುಪೇರು ಕಂಡುಬಂದಿದ್ದು ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ. ಸುಧಾಕರ್ ಮನೆಯ ಕೆಲಸದಾಳಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಮನೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ಕೊಟ್ಟಿದ್ದಾರೆ. ಸುಧಾಕರ್ ಅವರು ತಾವು ಸ್ವಯಂ ಕ್ವಾರಂಟೈನ್ ಆಗುವುದಾಗಿ ಹೇಳಿದ್ದು ಇಂದು ಸಂಜೆ ಮುಖ್ಯಮಂತ್ರಿಗಳ ಜೊತೆಗಿನ ಸಭೆಯಿಂದ ಹೊರಗುಳಿದಿದ್ದಾರೆ. ಸುಧಾಕರ್ ಅವರ ತಂದೆಯ ಗಂಟಲದ್ರವ ಪರೀಕ್ಷೆಗೆ ರವಾನಿಸಲಾಗಿದ್ದು ಅದರ ರಿಫೋರ್ಟ್ ಬಂದ ಬಳಿಕ ಮನೆಯನ್ನು ಸೀಲ್ ಡೌನ್ ಮಾಡುವ ಬಗ್ಗೆ ಚಿಂತನೆ ನಡೆಲಾಗುತ್ತದೆ ಎಂದು ಮೂಲಗಳು ಹೇಳಿವೆ.