“ಆನೆಗುಂಡಿ”ಯಲ್ಲಿ ಜುಗಾರಿ: 12 ಮಂದಿ ಸೆರೆ

ಮಂಗಳೂರು: ಬಿಜೈ ಆನೆಗುಂಡಿಯಲ್ಲಿರುವ ಕ್ರಿಸ್ಟಲ್ ಹೋಮ್ ಗೆಸ್ಟ್ ಹೌಸ್ ನಲ್ಲಿ ನಡೆಯುತ್ತಿದ್ದ ಇಸ್ಪೀಟ್ ಜುಗಾರಿ ಅಡ್ಡೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ದಂಧೆಯ ರೂವಾರಿ ಚೇತನ್ ಯಾನೆ ಕರಿಚೇತು ಸಹಿತ 12 ಮಂದಿಯನ್ನು ಬಂಧಿಸಿದ್ದಾರೆ.
ಬೈಕಂಪಾಡಿ ರಮಾನಂದ ಮಾರ್ಗದರ್ಶನದಲ್ಲಿ ಇಸ್ಪಿಟ್ ಜುಗಾರಿ ಬೈಕಂಪಾಡಿ ಬಳಿಯ ಕ್ಲಬ್ ನಲ್ಲಿ ನಡೆಯುತ್ತಿತ್ತು ಇತ್ತೀಚೆಗೆ ಪೊಲೀಸರ ಸರಣಿ ದಾಳಿಯಿಂದಾಗಿ ಪ್ರತಿ ದಿನ ಬೇರೆ ಬೇರೆ ಬೈಕಂಪಾಡಿ ಬಳಿಯ ಗುಡ್ಡೆ ಸಹಿತ ಅನೇಕ ಅಡ್ಡೆಗಳಲ್ಲಿ ಇಸ್ಪೀಟ್ ಜುಗಾರಿ ಆಟ ನಡೆಯುತ್ತಿತ್ತು ಎನ್ನಲಾಗಿದೆ.
ಇಂದು ಸಂಜೆ ಆನೆಗುಂಡಿಯ ಮನೆಯೊಂದರಲ್ಲಿ ಜುಗಾರಿ ನಡೆಸಲಾಗುತ್ತಿತ್ತು. ಈ ಕುರಿತ ಮಾಹಿತಿ ಪಡೆದ ಸಿಸಿಬಿ ಇನ್ ಸ್ಪೆಕ್ಟರ್ ಶಿವಪ್ರಕಾಶ್ ಮತ್ತು ಎಸ್ಐ ಕಬ್ಬಾಳ್ ರಾಜ್ ಅವರ ತಂಡ ದಾಳಿ ನಡೆಸಿ 12 ಮಂದಿಯನ್ನು ಬಂಧಿಸಿದೆ. ದಂಧೆಯಲ್ಲಿ ಬಳಸಿದ ಹಣ ಮತ್ತಿತರ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ.